ಕುಂದಾಪುರ :ಯುವಜನತೆ ಸಂಘಟಿತರಾದಾಗ ಸಮಾಜದ ಉನ್ನತಿ ಸಾಧ್ಯ – ಸದಾಶಿವ ಶೆಟ್ಟಿ

0
445

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಒಂದು ಸಮಾಜದ ಸರ್ವತೋಮುಖ ಏಳಿಗೆಯಾಗಬೇಕಾದರೆ ಆ ಸಮಾಜದ ಶ್ರೀಮಂತ ವರ್ಗ ಆರ್ಥಿಕ ಬೆಂಬಲವನ್ನು ದುರ್ಬಲರ ಅಭಿವೃದ್ದಿಗೆ ವಿನಿಯೋಗಿಸಬೇಕು ಎಂದು ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.

ಅವರು ಭಾನುವಾರ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ದಶಮ ಸಂಭ್ರಮದ ಪ್ರಯುಕ್ತ ನಡೆದ ವಿವಿಧ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Click Here

ಬಂಟ ಸಮಾಜದಲ್ಲಿ ಶೇ.80ರಷ್ಟು ಬಡವರಿದ್ದಾರೆ. ಅವರ ಆರೋಗ್ಯ, ಶಿಕ್ಷಣ ಹಾಗು ಆರ್ಥಿಕ ಸಮಸ್ಯೆಗಳಿಗೆ ಶ್ರೀಮಂತರು ಸಹಾಯ ಹಸ್ತ ಚಾಚಬೇಕು. ಕೋಟ್ಯಾಧೀಶರನ್ನು ಹುಡುಕಿ ಅವರ ಮನವೊಲಿಸಿ ಸಂಘಟನೆಗೆ ಆರ್ಥಿಕ ಬೆಂಬಲ ಪಡೆಯಬೇಕು. ಪ್ರತಿಭಾನ್ವಿತರಿಗೆ ಬೆಂಬಲ ನೀಡುವ ಮೂಲಕ ಸಂಘಟನೆಯನ್ನು ಬಲಗೊಳಿಸಬೇಕು ಎಂದು ಕರೆ ನೀಡಿದರು.

ಸಾಧಕರು ನಮಗೆ ಮಾರ್ಗದರ್ಶಕರಾಗುತ್ತಾರೆ. ಅವರ ದಾರಿಯಲ್ಲಿ ಯುವಕರು, ವಿದ್ಯಾರ್ಥಿಗಳು ಸಾಗಬೇಕು. ಸಂಘದಿಂದ ಸಹಾಯ ಪಡೆದವರು ಅದರ ನೂರು ಪಟ್ಟು ಸಾಧನೆ ಮಾಡಿ ಸಂಘಟನೆ ಮತ್ತು ಸಮಾಜದ ಋಣ ತೀರಿಸಬೇಕು. ಸಂಘಟನೆಗಳ ನಾಯಕತ್ವ ತೆಗೆದುಕೊಳ್ಳುವವರು ಸಮಾಜವನ್ನು ಮುನ್ನಡೆಸುವ ಜವಾಬ್ಧಾರಿ ತೆಗೆದುಕೊಳ್ಳಬೇಕು ಎಂದು ಐಕಳ ಹರೀಶ್ ಹೇಳಿದರು.

ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ 95 ವರ್ಷದ ಮೊಳಹಳ್ಳಿ ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ವೈದ್ಯಕೀಯ ಕ್ಷೇತ್ರದಿಂದ 85 ವರ್ಷದ ಡಾ. ವೈ.ಎಸ್.ಹೆಗ್ಡೆ, ಲೆಕ್ಕಪರಿಶೋಧನಾ ಕ್ಷೇತ್ರದಿಂದ ಕೆ. ಸುಧಾಕರ ಹೆಗ್ಡೆ, ನ್ಯಾಯಾಂಗ ಕ್ಷೇತ್ರದಿಂದ ಎ.ಬಿ.ಶೆಟ್ಟಿ , ಹೋಟೇಲ್ ಕ್ಷೇತ್ರದಿಂದ ಬಿ. ಅರುಣ್ ಕುಮಾರ್ ಶೆಟ್ಟಿ, ಪರಿಸರ ಕ್ಷೇತ್ರದಿಂದ ಕೊರ್ಗಿ ವಿಠಲ ಶೆಟ್ಟಿ, ಗ್ರಾಮೀಣ ಶಿಕ್ಷಣ ಕ್ಷೇತ್ರದಿಂದ ವೀರಣ್ಣ ಶೆಟ್ಟಿ, ಉನ್ನತ ಶಿಕ್ಷಣ ಕ್ಷೇತ್ರದಿಂದ ಡಾ. ಬಿ.ಜಗದೀಶ್ ಶೆಟ್ಟಿ, ಕೈಗಾರಿಕಾ ಕ್ಷೇತ್ರದಿಂದ ಕೆ. ಜಯಕರ ಶೆಟ್ಟಿ, ಹೈನುಗಾರಿಕಾ ಕ್ಷೇತ್ರದಿಂದ ಸುಧಾಕರ ಶೆಟ್ಟಿ ಜನ್ಸಾಲೆಯವರಿಗೆ 2023ನೇ ಸಾಲಿನ ದಶಮಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಲ್ಲದೇ ಚಂದ್ರಯಾನ 3 ಖ್ಯಾತಿಯ ಯುವ ವಿಜ್ಞಾನಿ ಆಕಾಶ್ ವಿ. ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಸಂಘದ ಮಹಾ ಪೋಷಕರಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹಾಗು ಐಕಳ ಹರೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಗೃಹಚೇತನ ಫಲಾನುಭವಿಗಳಿಗೆ ಚೆಕ್, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿಶೇಷ ಚೇತನರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಯುವ ಬಂಟರ ಸಂಘದ ಅಧ್ಯಕ್ಷ ಡಾ.‌ನಿತ್ಯಾನಂದ ಶೆಟ್ಟಿ ಅಂಪಾರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬೈಲೂರು ಉದಯಕುಮಾರ್ ಶೆಟ್ಟಿ ಸೇರಿದಂತೆ ಹಿರಿಯ ಮುಖಂಡರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here