ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಸಾಮ್ರಾಟ್ ಶೆಟ್ಟಿ ಗೌರವಾಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಜಯ್ ಕುಮಾರ್ ಶೆಟ್ಟಿ ಅವರನ್ನು ಶಾಲಾ ಅಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
“ಶಿಕ್ಷಣದ ಪ್ರತಿಯೊಂದು ಘಟ್ಟದಲ್ಲಿಯೂ ಮಗು ತನಗರಿವಿಲ್ಲದೆ ಶಿಕ್ಷಕರನ್ನು ಅನುಕರಿಸುತ್ತದೆ ಅನುಸರಿಸುತ್ತದೆ. ಸುಸಂಸ್ಕೃತ ಸಮಾಜ ನಿರ್ಮಾಣದ ವಿನ್ಯಾಸಕರಾಗಿ, ಬದುಕಿನ ರೂವಾರಿಗಳಾಗಿ, ಕರ್ತವ್ಯ ನಿರ್ವಹಿಸುವ ಶಿಕ್ಷಕ ವೃತ್ತಿ ಉಳಿದೆಲ್ಲ ವೃತ್ತಿ ಗಳಿಗಿಂತ ಭಿನ್ನವಾದುದು. ಉತ್ತಮ ಶಿಕ್ಷಕರು ಸಂಸ್ಥೆಯ ಆಸ್ತಿ , ಅವರ ಕ್ರಿಯಾಶೀಲತೆ, ವೃತ್ತಿ ಬದ್ಧತೆ ,ಪ್ರತಿಭೆಗಳು ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಏಳಿಗೆಗೆ ಮಹತ್ತರವಾದ ಕೊಡುಗೆ ನೀಡುತ್ತಾರೆ.” ಎಂದು ಪ್ರಕಾಶ್ಚಂದ್ರ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಕಂಡ್ಲೂರು ಇವರು ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು.
ಈ ಬಾರಿ ಕುಂದಾಪುರ ವಲಯ ಮಟ್ಟದ ಖೋ – ಖೋ ಪಂದ್ಯಾಟದಲ್ಲಿ ಸಂಸ್ಥೆಯ ಹುಡುಗರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಸಂಬಂಧ ತರಬೇತಿ ನೀಡಿ, ಶ್ರಮಿಸಿದ ಸಂಸ್ಥೆಯ ಕ್ರಿಯಾಶೀಲ ದೈಹಿಕ ಶಿಕ್ಷಣ ಶಿಕ್ಷಕರಾದ ಅಣ್ಣಪ್ಪ ಎಂ .ಗೌಡ ಇವರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶಿವ ಮೊಗವೀರ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಘವೇಂದ್ರ ಶೆಟ್ಟಿ ಕಲ್ಲೋಳಿ ಮನೆ , ಜ್ಯೋತಿ ಆಲಿಸ್ ಬುತ್ತೆಲ್ಲೋ, ಶಶಿಕಲಾ, ಸುಮಾ, ಮುಖ್ಯೋಪಾಧ್ಯಾಯರಾದ ಸುರೇಶ್ ಭಟ್, ಶಿಕ್ಷಕರಾದ ಗೋಪಾಲ್ ವಿಷ್ಣು ಭಟ್, ನಿತ್ಯಾನಂದ ಶೆಟ್ಟಿ ಹಳನಾಡು,ರಜನಿ .ಎಸ್. ಹೆಗಡೆ, ರತ್ನ, ಲಕ್ಷ್ಮಿ ಶೆಟ್ಟಿ, ಸಂಗೀತ , ಕುಮಾರಿ ದಿಶಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಸುರೇಶ್ ಭಟ್ ಸ್ವಾಗತಿಸಿ, ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ರಜನಿ. ಎಸ್. ಹೆಗಡೆ ಸಹ ಶಿಕ್ಷಕರು ಇವರು ವಂದಿಸಿದರು.