ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿ ಜಿಲ್ಲಾ ಆಡಳಿತ ತಂದ ಹೊಸ ನಿಯಮಾವಳಿಯಿಂದ ಲಾರಿ ಚಾಲಕರ ಮತ್ತು ಮಾಲಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ಆರೋಪಿಸಿದ ಕೋಟ ವಲಯದ ಲಾರಿ ಚಾಲಕರ ಮತ್ತು ಮಾಲಕರ ಸಂಘ ಮಂಗಳವಾರ ಕೋಟ ಹೈಸ್ಕೂಲ್ ಮೂರಕೈ ನಿಂದ ಪೊಲೀಸ್ ಠಾಣೆಯವರೆಗೂ ಕಾಲ್ನಡಿಗೆ ಮೂಲಕ ಜಾಥಾ ನಡೆಸಿ ಮನವಿ ಸಲ್ಲಿಸಿತು.
ಈ ಸಂದರ್ಭ ಮಾತನಾಡಿದ ಲಾರಿ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಭೋಜ ಪೂಜಾರಿ, ಜಿಲ್ಲಾಡಳಿತ ತಂದಿರುವಂತಹ ಹೊಸ ನಿಯಮಾವಳಿ ಪ್ರಕಾರ ಲಾರಿ ಚಾಲಕರ ಮತ್ತು ಮಾಲಕರಿಗೆ ಬಹಳ ಸಮಸ್ಯೆವಾಗುತ್ತಿದೆ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಲಂಕುಶವಾಗಿ ಪರಿಶೀಲಿಸಿ ವಾಹನ ಚಲಾವಣೆ ಮಾಡುವಲ್ಲಿ ತಂದಿರುವಂತಹ ಅನ್ವಯಗಳು ಮೊದಲನೇ ರೀತಿಯಲ್ಲಿ ಇರುವಂತೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಯ ಬದಿಯಲ್ಲಿ ತಮ್ಮ ಟಿಪ್ಪರ್ ಹಾಗೂ ಉಳಿದ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು
ಮನವಿ ಸ್ವೀಕರಿಸಿದ ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ಮನವಿಯನ್ನು ಜಿಲ್ಲಾಡಳಿತ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಸುಧೀರ್ ಮಲ್ಯಾಡಿ, ಮಹಾಬಲ ಪೂಜಾರಿ, ಗಣೇಶ್ ಸಂದೀಪ್ ಕೊಯಿಕೂರು, ವಿಜಯ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೋಟ ಎಸೈ ಸುಧಾ ಪ್ರಭು ಹಾಜರಿದ್ದರು.