ಕುಂದಾಪುರ ಮಿರರ್ ಸುದ್ದಿ…
ಕೋಟ: ಅಂಚೆ ಇಲಾಖೆಯಿಂದ ತಮ್ಮ ಕಾರ್ಯದ ನಡುವೆ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಅಂಚೆ ಅಧೀಕ್ಷಕ ರಮೇಶ್ ಪ್ರಭು ಹೇಳಿದರು.
ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರಲ್ಲಿ ಉಡುಪಿ ಅಂಚೆ ಇಲಾಖೆ ಆಶ್ರಯದಲ್ಲಿ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ ಪಟ್ಟಣಪಂಚಾಯತ್ ಸಹಯೋಗದೊಂದಿಗೆ ಅಂಚೆ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂಚೆ ಇಲಾಖೆ ಬರೆ ಕಾಗದ ಪತ್ರಕ್ಕೆ ಸೀಮಿತಗೊಳ್ಳದೆ ಜನಸಾಮಾನ್ಯ ಸೇವೆಯೊಂದಿಗೆ ಜನಸ್ನೇಹಿಯಾಗಿ ಗುರುತಿಸಿಕೊಂಡಿದೆ ಸಾಮಾನ್ಯ ಜನರ ತುಡಿತಗಳಿಗೆ ಸ್ಪಂದಿಸುವ ತಮ್ಮ ಇಲಾಖೆಯ ಕಾರ್ಯವೈಕರಿಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್, ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್,ಸಹಾಯಕ ಅಂಚೆ ಅಧೀಕ್ಷಕ ವಸಂತ್,ಕುಂದಾಪುರ ದಕ್ಷಿಣ ವಿಭಾಗದ ಅಂಚೆ ನಿರೀಕ್ಷಕ ರಾಮಚಂದ್ರ,ಉಡುಪಿ ಐಪಿಪಿಬಿ ವಿಭಾಗದ ನಿಖೀಲ್,ಸಾಲಿಗ್ರಾಮ ಅಂಚೆ ಪಾಲಕಿ ಗಾಯತ್ರಿ ಉಪಸ್ಥಿತರಿದ್ದರು. ಸಾಲಿಗ್ರಾಮ ಅಂಚೆ ಪೆದೆ ಪ್ರದೀಪ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಹಿರಿಯ ನಿವೃತ್ತ ಅಂಚೆ ಪೆದೆ ಮಂಜುನಾಥ್ ನಿರೂಪಿಸಿದರು.ಅಂಚೆ ಮೇಲ್ವಿಚಾರಕ ಕುಂದಾಪುರ ಮಹೇಂದ್ರ ವಂದಿಸಿದರು.