ಕೋಟ – ಹೋರಾಟ ತೀವ್ರಗೊಳಿಸಿದ ಲಾರಿ ಮಾಲಿಕರು, ಸ್ಥಳಕ್ಕೆ ಶಾಸಕರ ಭೇಟಿ

0
713

ಕುಂದಾಪುರ ಮಿರರ್ ಸುದ್ದಿ…

ಕೋಟ: ಕಟ್ಟಡ ಸಾಮಾಗ್ರಿಗಳನ್ನು ಹೊತೊಯುವ ಲಾರಿಗಳು ಕಾನೂನು ಬದ್ಧವಾಗಿ ಸಾಗಾಟ ಮಾಡಬೇಕು ಎಂಬ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆದೇಶದ ಹಿನ್ನಲ್ಲೆಯಲ್ಲಿ ಕೋಟ ವಲಯ ಲಾರಿ ಮಾಲಕರು ಹಾಗೂ ಚಾಲಕರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಕೋಟ ಮೂರ್‍ಕೈ ಬಳಿ ಠಿಕಾಣಿ ಹೂಡಿದ್ದ ಲಾರಿ ಮಾಲಕರು ಹಾಗೂ ಚಾಲಕರು ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ಕರೆ ನೀಡಿ ಜಿಲ್ಲಾಡಳಿತ ಕ್ರಮವನ್ನು ಖಂಡಿಸಿದ್ದಾರೆ.

ರಸ್ತೆಗಳಿದ ಲಾರಿಗಳ ಸಾಲು ಸಾಲು
ಕಳೆದೊಂದು ವಾರದಿಂದ ಲಾರಿಗಳನ್ನು ರಸ್ತೆಗಿಳಸದೆ ಪ್ರತಿಭಟಿಸುತ್ತಿರುವ ಹಿನ್ನಲ್ಲೆಯಲ್ಲಿ ಲಾರಿ ಮಾಲಕರು ಬುಧವಾರ ತಮ್ಮ ಎಲ್ಲಾ ಲಾರಿಗಳನ್ನು ಕೋಟ ಹೈಸ್ಕೂಲ್ ನಿಂದ ಕೋಟದವರೆಗೆ ರಸ್ತೆ ಸನಿಹ ಸಾಲು ಸಾಲಾಗಿ ನಿಲ್ಲಿಸಿ ತಮ್ಮ ಹೋರಾಟ ಕಾವಿಗೆ ಮುನ್ನಡಿ ಬರೆದು ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದರು..

Click Here

Click Here

ಮಾಜಿ ಸಚಿವ, ಶಾಸಕರು ಭೇಟಿ
ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ,ಶಾಸಕ ಕಿರಣ್ ಕುಮಾರ್ ಕೊಡ್ಗಿ,ಬಿಜೆಪಿ ಮುಖಂಡರಾದ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ,ಸ್ಥಳೀಯ ನ್ಯಾಯವಾದಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಇತ್ತ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ತಮ ಎಲ್ಲಾ ಶಾಸಕರ ಉಪಸ್ಥಿತಿಯಲ್ಲಿ ಸಭೆ ಅಯೋಜಿಸಲು ಸೂಚಿಸಿದ್ದಾರೆ.

ಕೇಸು ದಾಖಲಿಸದಿರಿ
ನಮ್ಮ ಲಾರಿಗಳು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವುದರಿಂದ ನಮ್ಮ ಲಾರಿಗಳ ಮೇಲೆ ಕೇಸು ದಾಖಲಿಸದಂತೆ ಲಾರಿ ಮಾಲಕರು ಆಗ್ರಹಿಸಿದ್ದಾರೆ.

ಅಂತತ್ರರಾದ ಕೂಲಿ ಕಾರ್ಮಿಕರು
ಲಾರಿ ಮಾಲಕ ಮುಷ್ಕರದಿಂದ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಕಟ್ಟಡ ಕಾರ್ಮಿಕರು ಸಾಮಗ್ರಿಗಳಿಲ್ಲದೆ ಅತಂತ್ರವಾಗಿದ್ದಾರೆ.

ಈ ಸಂದರ್ಭದಲ್ಲಿ ಹೋರಾಟಗಾರ ಪರವಾಗಿ ಭೋಜ ಪೂಜಾರಿ,ಜನಾರ್ದನ ಪೂಜಾರಿ,ವಿನೋದ್ ದೇವಾಡಿಗ,ಮತ್ತಿತರರು ಇದ್ದರು.

Click Here

LEAVE A REPLY

Please enter your comment!
Please enter your name here