ಕೋಟ- ‘ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ’ ರವಿ ಕಟಪಾಡಿ ಆಯ್ಕೆ

0
1818

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕೋಟದ ಗ್ರಾಮೀಣ ಭಾಗದಲ್ಲಿ ಕಳೆದ 24ವರ್ಷಗಳಿಂದ ತನ್ನ ಸಾಮಾಜಿಕ, ಕಲಾರಾಧನೆ, ಭಾಷಾಭಿಮಾನದ ನಡುವೆ ತನ್ನ ಸೇವೆಯನ್ನು ನಿರಂತರವಾಗಿ ನೀಡುತ್ತಾ ಬಂದಿರುವ ಕೋಟದ ಪಂಚವರ್ಣ ಯುವಕ ಮಂಡಲ ಪ್ರತಿವರ್ಷ ನವೆಂಬರ್ 1ರಂದು ಕೋಟದ ವರುಣತೀರ್ಥ ಕೆರೆ ಸಮೀಪ ಕನ್ನಡರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ತನ್ನ ಸಂಸ್ಥೆಯ ಮೂಲಕ ಸಾಧಕನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮಗಳ ನಡುವೆ ವಿವಿಧ ಸಾಂಸ್ಕೃತಿಕ ,ಆಶಕ್ತ ,ಆನಾರೋಗ್ಯ ಪೀಡಿತ ಕುಟುಂಬಗಳಿಗೆ ಸಹಾಯಹಸ್ತ, ಪ್ರತಿಭಾ ಪುರಸ್ಕಾರ, ಹೀಗೆ ನಾನಾ ರೀತಿಯ ವಿಶಿಷ್ಟ ಕಾರ್ಯಕ್ರಮಗಳಿಂದ ಮನೆಮಾತಾಗಿ ಬೆಳೆದಿದೆ.

ಈ ನಡುವೆ ಈ ಬಾರಿಯ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಅನಾರೋಗ್ಯ ಪೀಡಿತರ ಆಶಾಕಿರಣ, ಸಮಾಜ ಸೇವಕ ರವಿ ಕಟಪಾಡಿ ಇವರನ್ನು ಆಯ್ಕೆಗೊಳಿಸಲಾಗಿದೆ. ಇದೇ ಬರುವ ನವೆಂಬರ್ 1ರಂದು ಕೋಟದ ವರುಣತೀರ್ಥಕೆರೆ ಸಮೀಪ ಅಮೃತೇಶ್ವರಿ ದೇವಳದ ಪಾರ್ಕಿಂಗ್ ಸ್ಥಳದಲ್ಲಿ ಪ್ರಶಸ್ತಿ ಪ್ರದಾನಸಮಾರಂಭ ನಡೆಯಲಿದ್ದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದಾನಮಾಡಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Click Here

Click Here

ಈ ಹಿಂದೆ ಪ್ರಶಸ್ತಿ ಭಾಜನರಾದರವರು
ಚಿತ್ರರಂಗದ ರವಿ ಬಸ್ರೂರ್,ಮುಖ್ಯಮಂತ್ರಿ ಚಂದ್ರು,ಉಮಾಶ್ರೀ,ಕ್ರೀಡಾಕ್ಷೇತ್ರದಲ್ಲಿ ಕಬ್ಬಡಿಪಟು ರಿಶಾಂಕ್ ದೇವಾಡಿಗ,ಕಲಾಕ್ಷೇತ್ರದಲ್ಲಿ ಕೋಟ ಸುರೇಶ್ ಬಂಗೇರ,ಎಚ್ ಶ್ರೀಧರ ಹಂದೆ,ಸಮಾಜಸೇವೆ ಹರೇಕಳ ಹಾಜಬ್ಬ,ವಿಶುಶೆಟ್ಟಿ ಅಂಬಲಪಾಡಿ ಹೀಗೆ ಹಲವು ಕ್ಷೇತ್ರದ ಸಾಧಕರು ಪ್ರಶಸ್ತಿ ಪುರಸ್ಕರಿಸಿಕೊಂಡಿದ್ದಾರೆ.

Click Here

LEAVE A REPLY

Please enter your comment!
Please enter your name here