ಕೋಟ: ಈದ್ ಮಿಲಾದ್ ರ್ಯಾಲಿ – ಹಿಂದೂ ಮುಸ್ಲಿಂ ಸೌಹಾರ್ದದತೆಗೆ ಸಾಕ್ಷಿಯಾದ ಕೋಟತಟ್ಟು ಪಡುಕರೆ

0
1068

ಕುಂದಾಪುರ ಮಿರರ್ ಸುದ್ದಿ…

ಕೋಟ: ಲೋಕ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನುಮದಿನದ ಪ್ರಯುಕ್ತ ಬ್ರಹ್ಮಾವರ ತಾಲೂಕಿನ ಕೋಟತಟ್ಟುನಿಂದ ಕೋಡಿ ಕನ್ಯಾಣದವರೆಗೆ ಮುಸ್ಲಿಮರು ಬಹು ಸಂಖ್ಯೆಯಲ್ಲಿ ಮದರಸ ಮಕ್ಕಳು, ಕಿರಿಯರು, ಹಿರಿಯರು ಸೇರಿ ಕಾಲ್ನಡಿಗೆಯಲ್ಲಿ ಈದ್ ಮಿಲಾದ್ ಸಂದೇಶ ರ್ಯಾಲಿಯನ್ನು ನಡೆಸಿದರು.

Click Here

Click Here

ಈ ಸಂದರ್ಭದಲ್ಲಿ ಹಿಂದೂ ಬಾಂಧವರು ಕೂಡಾ ಈ ರ್ಯಾಲಿಗೆ ಸಹಕಾರ ನೀಡುವ ಮೂಲಕ ಹಿಂದೂ – ಮುಸ್ಲಿಂ ಸೌಹಾರ್ದಾತೆಗೆ ಸಾಕ್ಷಿಯಾದರು. ರ್ಯಾಲಿ ಸಾಗುವ ದಾರಿಯಲ್ಲಿ ಹಿಂದೂ ಬಾಂಧವರು ಐಸ್ ಕ್ರೀಮ್, ತಂಪು ಪಾನೀಯಗಳನ್ನು ವಿತರಿಸಿ ರ್ಯಾಲಿಯಲ್ಲಿ ಬಳಲಿದವರ ದಣಿವಾರಿಸಿದರು.

ಕೋಟತಟ್ಟು ಪಡುಕರೆಯ ರತ್ನಾಕರ ಶ್ರೀಯಾನ್ ಅವರ ಮುಂದಾಳತ್ವದಲ್ಲಿ, ಕೋಟ ಸಿ. ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಅವರ ಉಪಸ್ಥಿತಿಯಲ್ಲಿ ರ್ಯಾಲಿಯಲ್ಲಿ ಬಂದ ಮುಸ್ಲಿಮರಿಗೆ ಐಸ್ ಕ್ರೀಮ್ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು.

ಈ ಸಂದರ್ಭ ತಿಮ್ಮ ಬಿ. ಪೂಜಾರಿ, ರೇಖಾ ಪಿ. ಸುವರ್ಣ, ರತ್ನಾಕರ ಶ್ರೀಯಾನ್, ಮಹಾಬಲ ದೇವಾಡಿಗ, ಪ್ರತಾಪ್ ಪೂಜಾರಿ ಪಾರಂಪಳ್ಳಿ, ಉಮೇಶ್ ಪಡುಕರೆ, ನಾಗರಾಜ್, ಗಿರೀಶ್ ಪಡುಕರೆ ಮೊದಲದವರು ಭಾಗಿಯಾಗಿದ್ದರು. ಮುಸ್ಲಿಂ ಮುಖಂಡರು ಧನ್ಯವಾದಗಳನ್ನು ಸಲ್ಲಿಸಿದರು.

Click Here

LEAVE A REPLY

Please enter your comment!
Please enter your name here