ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಗಾಂಧಿ ಜಯಂತಿಯ ಅಂಗವಾಗಿ ದೇಶದಾದ್ಯಂತ ಜರುಗಲಿರುವ ಸ್ವಚ್ಛತಾ ಆಂದೋಲನದ ಅಂಗವಾಗಿ ಅ.1 ಭಾನುವಾರ ಬೆಳಿಗ್ಗೆ 7 ರಿಂದ 9 ರ ತನಕ ಕೋಡಿ ಲೈಟ್ ಹೌಸ್ ಬಳಿಯಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನೇತೃತ್ವದಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಪುರಸಭೆ ಕುಂದಾಪುರ, ವಕೀಲರ ಸಂಘ ಕುಂದಾಪುರ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ, ವಾದಿರಾಜ ಇಂಜಿನಿಯರಿಂಗ್ ಕಾಲೇಜು ಬಂಟಕಲ್ಲು, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ರೆಡ್ ಕ್ರಾಸ್ ಕುಂದಾಪುರ, ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ಜರುಗಲಿದೆ.
ಸ್ವಚ್ಚತಾ ಕಾರ್ಯದಲ್ಲಿ ಪ್ರಮುಖವಾಗಿ ಕುಂದಾಪುರದ ನ್ಯಾಯಾಂಗ ಇಲಾಖೆಯ ನ್ಯಾಯಮೂರ್ತಿಗಳು ಹಾಗೂ ಕುಂದಾಪುರ ಸಹಾಯಕ ಆಯುಕ್ತೆ ಭಾಗವಹಿಸಲಿದ್ದಾರೆ. ಪರಿಸರಾಸಕ್ತರು ಭಾಗವಹಿಸುವಂತೆ ಕೋರಲಾಗಿದೆ ಎಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸಂಚಾಲಕ ಭರತ್ ಬಂಗೇರ ತಿಳಿಸಿದ್ದಾರೆ.