ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರಾಷ್ಟ್ರಪಿತ ಮಹಾತ್ಮಗಾಂಧಿಯವರ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ಹಿರಿಯ ಮುಖಂಡರಾದ ಶೇಖರ ಚಾತ್ರಬೆಟ್ಟು ಮಾತನಾಡಿ “ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಗಾಂಧೀಜಿಯವರ ಅಹಿಂಸಾ ಮಾರ್ಗವು ಮಹತ್ತರ ಪಾತ್ರ ವಹಿಸಿತ್ತು. ಮಹಾನ್ ನಾಯಕರೆಲ್ಲ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಅನುಸರಿಸಿಕೊಂಡಿದ್ದಾರೆ. ನಾವೆಲ್ಲರೂ ಗಾಂಧಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಸಿ ಹೋಗಬೇಕು ಎಂದರು.
ನ್ಯಾಯವಾದಿಗಳಾದ ಸಚ್ಚಿದಾನಂದ ಎಂ. ಎಲ್ ಗಾಂಧೀಜಿಯವರ ತತ್ವ, ಆದರ್ಶದ ಕುರಿತು ಮಾತನಾಡಿದರು.
ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್, ಅಭಿಜಿತ್ ಪೂಜಾರಿ ,ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ಕೇಶವ್ ಭಟ್,ಸುನಿಲ್ ಪೂಜಾರಿ, ಜೋಸೆಫ್ ರೆಬೆಲ್ಲೊ, ಸುಶಾಂತ್, ಎಡಾಲ್ಫ್ ಡಿಕೋಸ್ತಾ, ಫ್ರಾನ್ಸಿಸ್ ಮಚಾದೊ, ಜ್ಯೋತಿ ಡಿ ನಾಯ್ಕ್, ದಿನೇಶ, ಪ್ರೀತಮ್ ಕರ್ವಾಲ್ಲೊ, ಕೆ. ಶಿವಕುಮಾರ್, ಶಶಿರಾಜ್ ಪೂಜಾರಿ, ಕೆ. ಪಿ. ಅರುಣ್, ಮೇಬಲ್ ಡಿಸೋಜ, ಸಂತೋಷ್, ಸದಾನಂದ ಖಾರ್ವಿ ಉಪಸ್ಥಿತರಿದ್ದರು.
ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ ಸ್ವಾಗತಿಸಿ ಅಶೋಕ ಸುವರ್ಣ ವಂದಿಸಿದರು.ಕಾರ್ಯದರ್ಶಿ ಆಶಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿದರು.