ಕುಂದಾಪುರ ಬಿಜೆಪಿ ಕಾರ್ಯಕ್ಷೇತ್ರದಲ್ಲಿ ಹಲವಾರು ಜನರಿಗೆ ದೃಷ್ಠಿ ನೀಡುವ ಹೆಮ್ಮೆಯ ಕಾರ್ಯಕ್ರಮ – ಕಿದಿಯೂರು ಉದಯ್ ಕುಮಾರ್ ಶೆಟ್ಟಿ

0
422

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಭಾರತೀಯ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಕುಂದಾಪುರ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್ಸಿಲರ್ ವಿಷನ್ ಪೌಂಡೇಷನ್ ಇವರ ಸಹಯೋಗದಲ್ಲಿ ಸೆ.17 ರಂದು ಕೋಟ ಮಾಂಗಲ್ಯ ಮಂದಿರದಲ್ಲಿ ನಡೆದ ಯಶಸ್ವಿ ನೇತ್ರ ತಪಾಸಣಾ ಶಿಬಿರದಲ್ಲಿ ಆಯ್ದ 293 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಮಂಗಳವಾರ ಕೋಟ ಮಾಂಗಲ್ಯ ಮಂದಿರದಲ್ಲಿ ಜರುಗಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ ಮಾತನಾಡಿ ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿಯಿಂದ ದೇಶಾದ್ಯಂತ ಇಂತಹ ಅನೇಕ ಸೇವಾಕಾರ್ಯ ನಡೆದಿದೆ ಅದರಲ್ಲಿ ಕುಂದಾಪುರ ಮಂಡಲದಲ್ಲಿ ಜರುಗಿದ ಈ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಹಲವಾರು ಜನರಿಗೆ ದೃಷ್ಠಿ ನೀಡುವ ಹೆಮ್ಮೆಯ ಕಾರ್ಯಕ್ರಮವಾಗಿದೆ ಇದು ರಾಜ್ಯಕ್ಕೆ ಮಾದರಿಯಾಗಿದೆ ಶ್ಲಾಘಿಸಿದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ ಮಹಿಳಾ ಮೋರ್ಚಾ ಜಿಲ್ಲಾದ್ಯಂತ ಮೊದಲಿಂದಲೂ ಜನಪರ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದು ಪ್ರಸ್ತುತ ಈ ಕಾರ್ಯಕ್ರಮವು ಕೂಡ ಜನಸೇವೆಗೆ ಮಾದರಿಯಾಗಿ ಮಾಡಿದ್ದೇವೆ ಎಂದು ಉಲ್ಲೇಖಿಸಿ ಕನ್ನಡಕದ ಬಳಕೆ ಮತ್ತು ಕಣ್ಣಿನ ಸುರಕ್ಷತೆಯ ಕುರಿತಾಗಿ ವಿವರಿಸಿದರು.

Click Here

ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ದೇಶಾದ್ಯಂತ ಬಡವರ್ಗದ ಜನತೆಗೆ ಸೇವೆಯ ರೂಪದಲ್ಲಿ ಜನ್ಮದಿನದ ಆಚರಣೆ ಆಗಬೇಕು ಎಂಬ ಪಕ್ಷದ ಕರೆಯ ಮೇರೆಗೆ ಸೆ. 17ರಿಂದ 20 ದಿನಗಳ ಕಾರ್ಯಕ್ರಮ ಕುಂದಾಪುರ ಭಾಗದಲ್ಲಿ ಅನೇಕ ಜನಪರ, ಜನಸೇವೆಯ ಕಾರ್ಯಕ್ರಮ ನಡೆದಿದೆ, ದೇಶದಲ್ಲಿ ಜನಸೇವೆ ಮೂಲಕ ಜನರನ್ನು ತಲುಪುವ ಪಕ್ಷವಿದ್ದರೆ ಅದು ಕೇವಲ ಭಾರತೀಯ ಜನತಾ ಪಾರ್ಟಿ ಮಾತ್ರ, ಅದು ಕರೋನದಂತ ಸಮಯದಲ್ಲೂ ಕೂಡ ಮನೆಯಲ್ಲಿ ಕುಳಿತುಕೊಳ್ಳದೆ ಜನತೆಯ ಮಧ್ಯ, ರೋಗಿಗಳ ಮಧ್ಯೆ ತೆರಳಿ ದುಡಿದಿದೆ, ಅಂತ ಪಕ್ಷದ ಕಾರ್ಯಕರ್ತರಾದ ನಮಗೆಲ್ಲ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿ ಶೆಟ್ಟಿ, ಕೋಟ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಅಜಿತ್ ಕೊತ್ತಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಕೋಟತಟ್ಟು ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಕುಂದಾಪುರ ಅಧ್ಯಕ್ಷೆ ರೂಪಾ ಪೈ ವಹಿಸಿದ್ದರು.

ಕುಂದಾಪುರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೌರಭಿ ಪೈ ನಿರೂಪಿಸಿ, ಅನಿತಾ ಶ್ರೀಧರ್ ವಂದಿಸಿದರು,

Click Here

LEAVE A REPLY

Please enter your comment!
Please enter your name here