ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮಹಾತ್ಮ ಗಾಂಧಿ ಅವರು ಕೇವಲ ಸ್ವತಂತ್ರ ಹೋರಾಟಗಾರ ಮಾತ್ರವಲ್ಲ ಬದಲಾಗಿ ಭಾರತೀಯರ ಆರ್ಥಿಕತೆ, ಸ್ವದೇಶಿ ಭಾವ, ಹರಿಜನ ಉದ್ದಾರ, ಸರ್ವ ಧರ್ಮ ಸಮನ್ವಯಗಳಂತಹ ಎಲ್ಲಾ ಕ್ಷೇತ್ರವನ್ನೂ ಪ್ರಭಾವಿಸಿದ ಯುಗ ಪುರುಷ ಎಂದು ಕೆ.ಪಿ.ಎಸ್ ಕೋಟೇಶ್ವರದ ಪ್ರಾಂಶುಪಾಲರಾದ ಸುಶೀಲಾ ಹೊಳ್ಳ ರವರು ಅಭಿಮತಿಸಿದರು.
ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ಹಮ್ಮಿಕೊಂಡ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಸಮಾರಂಭದ ಮುಖ್ಯ ಅತಿಥಿ ಯಾಗಿ ಮಾತನ್ನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರ ಶೇಖರ್ ಶೆಟ್ಟಿರವರು ಗಾಂಧಿ ಮತ್ತು ಶಾಸ್ತ್ರಿರವರು ನಡೆ ನುಡಿಗಳಲ್ಲಿ ಒಂದಾಗಿ ದೇಶದ ಅಭುದ್ಯಯಕ್ಕಾಗಿ ಬಾಳಿ ಬೆಳಕಾದವರು. ಅವರ ಜೀವನ ಆದರ್ಶಗಳೆ ನಮಗೆ ಅನುಸರಣನೀಯ ಎಂದು ಪ್ರತಿಪಾದಿಸಿದರು. ಈರ್ವರು ಮಹಾನ್ ಸ್ವತಂತ್ರ ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.ಈರ್ವರು ಶ್ರೇಷ್ಠ ಮಹನೀಯರ ಬಗ್ಗೆ ಕುಮಾರಿ ಪ್ರಣಮ್ಯ, ವೈಷ್ಣವಿ ಮತ್ತು ಯತೀಶ್ ತಮ್ಮ ಮನದ ಮಾತು ಅಭಿವ್ಯಕ್ತಿಸಿದರು. ರಶ್ಮಿ, ಅನಿಲ್ ಮತ್ತು ಫೈಸಲ್ ಸರ್ವಧರ್ಮೀಯ ಪ್ರಾರ್ಥನೆಗೆ ದನಿಯಾದರು.
ಶಾಲಾ ಕಾಲೇಜು ಅಧ್ಯಾಪಕಿ ಯರು ಗಾಂಧಿ ಪ್ರೀತ ರಾಮನಾಮ ಭಜನೆ ಹಾಡಿದರು.ಅಧ್ಯಾಪಕ ರಮಾನಂದ ನಾಯಕ್ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಹರೀಶ್ ನಾಯಕ್ ವಂದಿಸಿದರು. ಸಂಸ್ಥೆಯ ಎಲ್ಲಾ ಅಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳು ಶಾಲಾ ಆವರಣ ಶುಚಿ ಗೊಳಿಸುವ ಮೂಲಕ ಶ್ರಮದಾನ ಮಾಡಿದರು.