ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಳೆದ ಎರಡು ಅವಧಿಯಲ್ಲಿ ಭಾರತದ ಪ್ರದಾನ ಮಂತ್ರಿಗಳಾಗಿರುವ ನರೇಂದ್ರ ಮೋದಿಯವರ ಸಾಧನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಜನಗಣಮನ ಬೆಸೆಯೋಣ ಬೈಕ್ ಜಾಥಾ ಸೋಮವಾರ ಕುಂದಾಪುರಕ್ಕೆ ಬಂದಿತು.
ಬೈಕ್ ಜಾಥಾ ನೇತೃತ್ವ ವಹಿಸಿದ ಚಕ್ರವರ್ತಿ ಸೂಲಿಬೆಲೆ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಮೋದಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು. ಇಂದು ಜಗತ್ತು ಭಾರತವನ್ನು ಗೌರವಿಸುವಂತೆ ಮೋದಿ ಮಾಡಿದ್ದಾರೆ. ಈಗ ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಿದ್ದಾರೆ. ಮೂರನೇ ಅವಧಿಗೆ ಮೋದಿ ಪ್ರದಾನಿಯಾದರೆ ಭಾರತ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಮೊಬೈಲಲ್ಲಿ ಬ್ಯಾಂಕ್ ತಂದುಕೊಡುವಲ್ಲಿಂದ ಹಿಡಿದು ಅಗ್ನಿವೀರನ ವರೆಗೆ ವ್ಯವಸ್ಥೆ ಮಾಡಿರುವ ಮೋದಿ, ತಾಯಂದಿರಿಗೆ ಗ್ಯಾಸ್ ಸಿಲಿಂಡರ್ ನೀಡಿರುವ ಮೋದಿಯನ್ನು ಕಳೆದುಕೊಂಡರೆ ಅದು ಭಾರತದ ಪಾಲಿಗೆ ಘೋರ ದುರಂತವಾಗಲಿದೆ. ಉಚಿತಗಳಿಗೆ, ಸುಳ್ಳು ಮೋಸಗಳಿಗೆ ನಾವು ಭಾರತವನ್ನು ಕಳೆದುಕೊಳ್ಳಬಾರದು ಎಂದರು. ಈ ಸಂದರ್ಭ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.