ಕುಂದಾಪುರ ಮಿರರ್ ಸುದ್ದಿ…
ಕೋಟ: ಪಾಂಡೇಶ್ವರ ಗ್ರಾಮ ಪಂಚಾಯತ್ ಬ್ರಹ್ಮಾವರ ತಾಲ್ಲೂಕು ಇದರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ‘ನಮ್ಮ ಗ್ರಾಮ ಸ್ವಚ್ಛಗ್ರಾಮ’ ಗ್ರಾಮ ನೈರ್ಮಲ್ಯ ಸ್ವಚ್ಚತಾ ಕಾರ್ಯದ ಪ್ರಯುಕ್ತ ಸೂಲ್ಕುದ್ರು ಪರಿಸರದಲ್ಲಿ ಶ್ರಮದಾನದ ಮೂಲಕ ರಸ್ತೆಯ ಪಕ್ಕದ ಹುಲ್ಲುಗಿಡಗಳನ್ನು ಕತ್ತರಿಸಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಾಂಡೇಶ್ವರ ಪಂಚಾಯತ್ ಅಧ್ಯಕ್ಷೆ ಸುಶೀಲಾ ಸದಾನಂದ ಪೂಜಾರಿ. ಉಪಾಧ್ಯಕ್ಷ ವೈ.ಬಿ. ರಾಘವೆಂದ್ರ, ಪಿ. ಡಿ. ಓ ಲೋಲಾಕ್ಷಿ, ಕಾರ್ಯದರ್ಶಿ ವಿಜಯ, ಗ್ರಾಮ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜೇಮ್ಸ್ ಒಲ್ವೆರಾ, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶೇಷನ್ ಕರ್ನಾಟಕ. ಸಂತ ಆಂತೋನಿ ದೇವಾಲಯ ಸಾಸ್ತಾನ ಘಟಕ ಇವರ ಅಧ್ಯಕ್ಷ ವಿಜಯ್ ಲೂವಿಸ್, ಸ್ವಸಹಾಯ ಸಂಘಗಳ ಪದಾಧಿಕಾರಿಗಳಾದ ಮೇಬಲ್.ಡಿ ಸೋಜ, ಸ್ಟ್ಯಾನಿ ಡಿ. ಅಲ್ಮೇಡಾ, ತೆರೇಸಾ ಒಲ್ಮೆರಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.