ಮಣೂಡು ಪಡುಕರೆ ಸಂಯುಕ್ತ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ
ಕುಂದಾಪುರ ಮಿರರ್ ಸುದ್ದಿ…
ಕೋಟ: ಉಡುಪಿ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ ವಲಯ, ಸಂಯುಕ್ತ ಸರಕಾರಿ ಪ್ರೌಢಶಾಲೆ ಪ್ರಾಥಮಿಕ ವಿಭಾಗ ಮಣೂರು ಪಡುಕರೆ ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ -2023-24 ಕಾರ್ಯಕ್ರಮ ಸರಕಾರಿ ಮಣೂರು ಸಂಯುಕ್ತ ಪ್ರೌಢಶಾಲೆ ನಡೆಯಿತು.
ಗೀತಾನಂದ ಫೌಂಡೇಶನ್ ಮಣೂರು ಇದರ ಪ್ರವರ್ತಕ ಆನಂದ್ ಸಿ ಕುಂದರ್ ಧ್ವಜಾವಂದನೆ ಸ್ವೀಕರಿಸಿ ಕಾರ್ಯಕ್ರವನ್ನು ಉದ್ಘಾಟಿಸಿ ಕ್ರೀಡಾ ಚಟುವಟಿಗಳಲ್ಲಿ ದೈಹಿಕ ಶಿಕ್ಷಕರ ಪಾತ್ರ ಗಣನೀಯವಾದದ್ದು ಅಂತಯೇ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಬೇಕಾದರೆ ಅಂತಹ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರ ಕೊರತೆ ಎದುರಾಗಬಾರದು ನಮ್ಮ ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಏರುಗತಿಯನ್ನು ಕಾಣುತ್ತಿದೆ ಆದರೆ ಶಿಕ್ಷಕರ ಮಟ್ಟ ,ದೈಹಿಕ ಶಿಕ್ಷಕ ಹುದ್ದೆ ಭರ್ತಿ ಶಿಕ್ಷಕ ಇಲಾಖೆ ಅಥವಾ ಸರಕಾರ ನಿರಾಸಕ್ತಿ ತೊರುತ್ತಿವೆ ಇದರ ಬಗ್ಗೆ ಸಾಕಷ್ಟು ಒತ್ತಡಗಳನ್ನು ಹೇರಲಾಗಿದೆ. ಖಾಯಂ ದೈಹಿಕ ಶಿಕ್ಷಕರ ಬಗ್ಗೆ ಇಲಾಖೆ ಕಣ್ಣಾಯಿಸಬೇಕು ಎಂದು ಇಲಾಖಾಧಿಕಾರಿಗಳಲ್ಲಿ ಮನವಿ ಇತ್ತರು.ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿವೆ ಅವುಗಳನ್ನು ಹೊರಗೆಡವಲು ಇಂಥಹ ಕ್ರೀಡಾ ಕಾರ್ಯಕ್ರಮಗಳು ಸಹಕಾರಿಗಲಿದೆ ಎಂದು ಅಭಿಪ್ರಾಯಪಟ್ಟರು.
ಕ್ರೀಡಾಜ್ಯೋತಿಯನ್ನು ಕೋಟ ಆರಕ್ಷಕ ಠಾಣಾಧಿಕಾರಿ ಶಂಭು ಲಿಂಗಯ್ಯ ಬೆಳಗಿಸಿದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ ತಿಮ್ಮ ಪೂಜಾರಿ ಧ್ವಜಾರೋಹಣ ನೆರವೆರಿಸಿದರು. ವಿದ್ಯಾರ್ಥಿಗಳಿಂದ ಕ್ರೀಡಾ ಪಥಸಂಚಲ ನಡೆಯಿತು.
ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಲಕ್ಷ್ಮೀ ಸೋಮಬಂಗೇರ ಸ.ಪ್ರ.ಕಾಲೇಜಿನ ಪ್ರಾಂಶುಪಾಲೆ ಡಾ.ಸುನಿತಾ, ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ಬ್ರಹ್ಮಾವರ ತಾಲೂಕು ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಬ್ರಹ್ಮಾವರ ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ,ತಾಲೂಕು ದೈಹಿಕ ಪರಿವೀಕ್ಷಕಿ ಪದ್ಮಾವತಿ, ಕ್ಲಸ್ಟರ್ ಮಟ್ಟದ ಸಿಆರ್‍ಪಿ ಸವಿತಾ, ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ,ಸಂಯುಕ್ರ ಪ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್,ಶಾಲಾ ಎಸ್‍ಡಿಎಂಸಿ ಪ್ರಾಥಮಿಕ ವಿಭಾಗದ ಅಧ್ಯಕ್ಷ ನಾಗರಾಜ್,ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಜಯರಾಮ್ ಶೆಟ್ಟಿ ,ಪಿಯುಸಿ ವಿಭಾಗದ ಪ್ರಾಂಶುಪಾಲ ಡೆನಿಸ್ ಬಾಂಝಿ,ವಾಹನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್ ,ಜಿಲ್ಲಾ ದೈಹಿಕ ಶಿಕ್ಷಣ ಪರೀವಿಕ್ಷಣಾಧಿಕಾರಿ ಗೋಪಾಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸೇಸು ಟೀಚರ್ ಸ್ವಾಗತಿಸಿದರು.
ಕಾರ್ಯಕ್ರಮ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ಕೃಷ್ಣ ಆಚಾರ್ ನಿರೂಪಿಸಿದರು. ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕ ನಾರಾಯಣ ಮೊಗವೀರ ವಂದಿಸಿದರು.