ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಅನ್ನದಾಸೋಹ ನಡೆಸುವುದರಿಂದ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ವೃದ್ದಿಯಾಗುತ್ತದೆ. ಮೊಗವೀರ ಸಮಾಜದ ಎಲ್ಲ ದೇವಸ್ಥಾನಗಳಲ್ಲಿಯೂ ಅನ್ನದಾಸೋಹ ಚಿಂತನೆಗಳು ಇವೆ. ಈಗಾಗಲೇ ಉಚ್ಚಿಲದಲ್ಲಿ ನಿತ್ಯ ಅನ್ನದಾಸೋಹ, ಬೆಣ್ಣೆಕುದ್ರುವಿನಲ್ಲಿ ವಾರಕ್ಕೆ ಮೂರು ದಿನ ಅನ್ನಸಂತರ್ಪಣೆ ನಡೆಯುತ್ತಿದೆ. ಬಗ್ವಾಡಿಯಲ್ಲಿ ವಾರದಲ್ಲಿ ಎರಡು ದಿನ ಅನ್ನದಾಸೋಹ ನಡೆಯುವಂತಾಗಲಿ. ಬಗ್ವಾಡಿಯ ಅನ್ನದಾಸೋಹದ ನಿಧಿಯಲ್ಲಿ 70 ಲಕ್ಷ ಸಂಗ್ರಹವಾಗಿದೆ. ಚಿತ್ರಪೂರ್ಣಿಮೆಯ ರಥೋತ್ಸವದ ಒಳಗೆ ಅದು 1 ಕೋಟಿ ತಲುಪಲಿ. ಅದರ ಬಡ್ಡಿ ಹಣದಿಂದಲೇ ಅನ್ನದಾಸೋಹ ಸೇವೆ ನಡೆಯಲಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ.ಜಿ.ಶಂಕರ್ ಹೇಳಿದರು.
ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಡಾ.ಜಿ.ಶಂಕರ್ ಅವರ 68ನೇ ಜನ್ಮದಿನಾಚರಣೆಯ ಸವಿನೆನಪಿನಲ್ಲಿ ಪ್ರತಿ ಶುಕ್ರವಾರದ ಅನ್ನದಾಸೋಹ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊಗವೀರ ಸಮುದಾಯ ಇವತ್ತು ಪ್ರಗತಿ ಹೊಂದುತ್ತಿದೆ. ಯುವ ಸಂಘಟನೆಯಿಂದ ಶಾಸಕರಾಗುವ ಮಟ್ಟಕ್ಕೆ ಯುವ ಜನತೆ ಬೆಳೆದಿದ್ದಾರೆ. ನಾಯಕತ್ವ ಬೆಳೆಸಿಕೊಂಡಿದ್ದಾರೆ. ಮೊಗವೀರ ಯುವ ಸಮುದಾಯ ಬಲಿಷ್ಠವಾಗಿ ಬೆಳೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ವಹಿಸಿದ್ದರು.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‍ಪಾಲ್ ಸುವರ್ಣ, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್, ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಮಾಜಿ ಅಧ್ಯಕ್ಷ ರಮೇಶ ಬಂಗೇರ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಬಗ್ವಾಡಿ ಶಾಖೆಯ ನಿಕಟಪೂರ್ವ ಅಧ್ಯಕ್ಷ ಕೆ.ಕೆ ಕಾಂಚನ್, ಮಾಜಿ ಅಧ್ಯಕ್ಷ ಎಂ.ಎಂ.ಸುವರ್ಣ, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ,ಕೋಟ್ಯಾನ್, ಉಚ್ಚಿಲ ಕ್ಷೇತ್ರಾಡಳಿತದ ಅಧ್ಯಕ್ಷ ವಾಸುದೇವ ಸಾಲ್ಯಾನ್, ಉಚ್ಚಿಲ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ಚಿಕ್ಕಮಗಳೂರು ಮೊಗವೀರ ಸಂಘಟನೆಯ ನಾರಾಯಣ ಬಿ., ರಾಣೆಬೆನ್ನೂರು ಮೊಗವೀರ ಸಂಘಟನೆ ಅಧ್ಯಕ್ಷ ನಿತ್ಯಾನಂದ ಜೆ ಕುಂದಾಪುರ, ದ.ಕ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಸುಧಾಕರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರತ್ನಾ ಆರ್.ಕುಂದರ್, ಮೊಗವೀರ ಮಹಾಜನ ಸಂಘ ಮುಂಬಯಿ ಸಂಘಟನೆಯ ರಾಜೇಂದ್ರ ಚಂದನ್, ರಾಜು ತಗ್ಗರ್ಸೆ, ಮೊಗವೀರ ಸ್ತ್ರೀಶಕ್ತಿಯ ಅಧ್ಯಕ್ಷ ಶ್ಯಾಮಲ ಜಿ.ಚಂದನ್ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಶಕ್ತಿ ಕೇಂದ್ರವಾಗಿರುವ ಬಗ್ವಾಡಿಯಲ್ಲಿ ಮಧ್ಯಾಹ್ನ ಭಕ್ತರ ಉದರ ತಂಪಾಗಿಸುವ ನಿತ್ಯ ಅನ್ನಸಂತರ್ಪಣೆಗೆ ಯೋಜನೆ ರೂಪಿಸಬೇಕೆಂಬುದು ಭಕ್ತ ಜನರ ಬಹುದಿನದ ಕನಸು. ನಿತ್ಯ ಅನ್ನದಾನ ಕಾರ್ಯಕ್ರಮಕ್ಕೆ ಪೂರಕವಾಗಿ ಶ್ರೀ ಮಹಿಷಾಸುರಮರ್ದಿನಿ ಅನ್ನದಾಸೋಹ ನಿಧಿ ಸ್ಥಾಪಿಸಿ, ಭವಿಷ್ಯದ ನಿರಂತರ ಅನ್ನದಾಸೋಹದ ಹಿತದೃಷ್ಟಿಯಿಂದ ದೊಡ್ಡ ಮೊತ್ತದಲ್ಲಿ ಹಣ ಕ್ರೋಢೀಕರಿಸಿ ನಿಧಿಯಾಗಿಟ್ಟು ಅದರ ಮೂಲಕ ಅನ್ನದಾನದ ವ್ಯವಸ್ಥೆ ಮಾಡುವ ಸದುದ್ದೇಶದಿಂದ ಕನಿಷ್ಠ 365 ಸದ್ಭಕ್ತರಿಂದ ತಲಾ ರೂ. 10,000 ಮತ್ತು ಮೇಲ್ಪಟ್ಟು ಹಣ ಸಂಗ್ರಹಿಸುವ ಗುರಿ ಇಟ್ಟುಕೊಂಡು ಕಾರ್ಯಪ್ರವೃತ್ತವಾಗಿದೆ ಎಂದರು.
68ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿರುವ ಡಾ.ಜಿ.ಶಂಕರ್ ಹಾಗೂ ಶ್ಯಾಮಿಲಿ ಜಿ.ಶಂಕರ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿಯೇ ಅನ್ನಪೂಜೆ ನೆರವೇರಿಸಲಾಯಿತು. ಅನ್ನ ಸೇರಿದಂತೆ ಎಲ್ಲಾ ಭಕ್ಷ್ಯಗಳನ್ನು ಬಡಿಸಲಾಯಿತು. ಐವರು ಹಿರಿಯ ದಂಪತಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಕ್ಷೇತ್ರದ ಪುರೋಹಿತರಾದ ಗಿರೀಶ್ ಭಟ್ ವೇದಘೋಷ ಪಠಿಸಿದರು. ಮೊಗವೀರ ಯುವ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ಸತೀಶ ಎಂ.ನಾಯ್ಕ್ ಸ್ವಾಗತಿಸಿದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ ವಂದಿಸಿದರು. ಪತ್ರಕರ್ತ ಕೆ.ಸಿ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.