ಕುಂದಾಪುರ ಮಿರರ್ ಸುದ್ದಿ…
ಕೋಟ : ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷರಂಗದಲ್ಲಿ 25 ಸಂವತ್ಸರ ಕಳೆದ ಹಿನ್ನಲ್ಲೆಯಲ್ಲಿ ಯಕ್ಷ ರಜತ ಪರ್ವ ಎನ್ನುವ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಹಿನ್ನಲ್ಲೆಯಲ್ಲಿ ಇದರ ಆಮಂತ್ರಣ ಬಿಡುಗೆಡೆ ಸಮಾರಂಭ ಶನಿವಾರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ಸನ್ನಿದಾನದಲ್ಲಿ ನಡೆಯಿತು.
ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಯಕ್ಷರಂಗದ ಸವ್ಯಸಾಚಿ ಗುರುಗಳಾಗಿ ಸೇವೆ ಸಲ್ಲಿಸಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಜೀವನವೆ ಕಲಾಕೇತ್ರಕ್ಕೆ ಅರ್ಪಿಸಿಕೊಂಡಿದ್ದಾರೆ. ಸಾಕಷ್ಟು ಶಿಷ್ಯವರ್ಗ,ಕಲಾತಂಡಗಳನ್ನು ಹುಟ್ಡುಹಾಕಿ ಕಲಾ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದ್ದಾರೆ ಇವರ ಯಕ್ಷರಂಗದ ಬದುಕಿನ ಆಯಾಮಕ್ಕೆ ಹೊಸ ಮೆರುಗು ನೀಡಲು ಶಿಷ್ಯ ವೃಂದ ಅಭಿಮಾನಿಗಳು ಅಣಿಯಾಗಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಪೋಸ್ಟರ್ ಅನ್ನು ಯಕ್ಷಗರು ಕೃಷ್ಣಮೂರ್ತಿ ಉರಾಳ ಅನಾವರಣಗೈದರು,
ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಕುಮಾರ್, ಯಕ್ಷಕಲಾವಿದ ಸುರೇಶ್ ಬಂಗೇರ, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್, ಮಾಜಿ ಅಧ್ಯಕ್ಷ ಅಣ್ಣಪ್ಪ ಕುಂದರ್ ಕೋಡಿ, ರಜತ ಮಹೋತ್ಸವ ಸಮಿತಿ ಸಂಚಾಲಕ ರಾಘವೇಂದ್ರ ಕರ್ಕೇರ , ಯಕ್ಷಸೌರಭ ಕಲಾರಂಗ ಕೋಟ, ಮಯ್ಯ ಯಕ್ಷ ಶ್ರೀ ಪ್ರತಿಷ್ಠಾನ ಅಣಲಾಡಿ ಮಠ ಐರೋಡಿ, ಸ್ವರ್ಣ ನೂಪುರ ಯಕ್ಷಕಲಾ ಸಂಘ ಕುಂದಾಪುರ,ವಡ್ಡರ್ಸೆ ಯಕ್ಷಗಾನ ಕಲಾರಂಗ ,ಯಡಾಡಿ ಯಕ್ಷಗಾನ ಕಲಾರಂಗ, ಕೆದೂರು ಯಕ್ಷಗಾನ ಕಲಾರಂಗ,,ನಮ್ಮ ಭೂಮಿ ಯಕ್ಷಗಾನ ಕಲಾರಂಗ ಕುಂದಾಪುರ ಇನ್ನಿತರ ಯಕ್ಷಗಾನ ಕಲಾಸಂಘದ ಪದಾಧಿಕಾರಿಗಳು ,ಗಣ್ಯರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನಕಾರ್ಯದರ್ಶಿ ಶ್ರೀನಾಥ್ ಉರಾಳ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.