ಕೋಟ :ಪಂಚವರ್ಣ ಸಂಸ್ಥೆಯ 181ನೇ ವಾರದ ಅಭಿಯಾನ – ಪಾರಂಪಳ್ಳಿ ಸಮುದ್ರ ಕಿನಾರ ಸ್ವಚ್ಛತೆ

0
493

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಹಾಗೂ ಸಾಲಿಗ್ರಾಮ ಪಟ್ಟಣಪಂಚಾಯತ್, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಇವರ ನೇತ್ರತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್, ಯಕ್ಷಸೌರಭ ಕಲಾರಂಗ ಕೋಟ ಇವರುಗಳ ಸಹಯೋಗದೊಂದಿಗೆ 181ನೇ ವಾರದ ಸ್ವಚ್ಚತಾ ಅಭಿಯಾನದ ಪ್ರಯುಕ್ತ ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ ಬೀಚ್ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ 35ಕ್ಕೂ ಅಧಿಕ ಚೀಲ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.

Click Here

Click Here

ಸಾಲಿಗ್ರಾಮ ಪಟ್ಟಣಪಂಚಾಯತ್ ಆರೋಗ್ಯ ನೀರಿಕ್ಷಕಿ ಮಮತಾ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಕಾರ್ಯದರ್ಶಿ ಸುಧೀಂದ್ರ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ, ಕಾರ್ಯದರ್ಶಿ ಲಲಿತಾ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ, ಹಂದಟ್ಟು ಮಹಿಳಾ ಬಳಗದ ಸುಜಾತ , ವಿನ್ ಲೈಟ್ ಸ್ಪೋಟ್ಸ್ 9 ಕ್ಲಬ್ ಕಾರ್ಯದರ್ಶಿ ಸುಧಾಕರ್ ಪೂಜಾರಿ , ಪ.ಪಂ ಪೌರಕಾರ್ಮಿಕರು,ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ಸಾಲಿಗ್ರಾಮ ಪಟ್ಟಣಪಂಚಾಯತ್ ಪ್ಲಾಸ್ಟಿಕ್ ಇನ್ನಿತ ತ್ಯಾಜ್ಯಗಳ ವಾಹನ ಹಾಗೂ ಅದರ ನಿರ್ವಹಣೆಗೈಯಿತು.

Click Here

LEAVE A REPLY

Please enter your comment!
Please enter your name here