ಮಟಪಾಡಿಯಲ್ಲಿ ನವರತ್ನ ಮಿನಿ ಸಭಾಂಗಣ, 9ನೇ ಶಾಖೆ ಲೋಕಾರ್ಪಣೆ
ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ : ಇಲ್ಲಿನ ತಾಲೂಕಿನ ಮಟಪಾಡಿ ಗ್ರಾಮದಲ್ಲಿ ನಿರ್ಮಿಸಿದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಹವಾನಿಯಂತ್ರಿತ 9ನೇಯ ಶಾಖೆ ಮತ್ತು ನವರತ್ನ ಮಿನಿ ಸಭಾಂಗಣವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಬಹುದೊಡ್ಡ ಸವಾಲು ಇರುವುದು ಕಾರ್ಪೋರೇಟ್ ಬ್ಯಾಂಕ್ ಗಳ ಜೊತೆಗೆ ಪೈಪೋಟಿ ನಡೆಸುವುದು. ಆದರೆ ಸಹಕಾರಿ ಬ್ಯಾಂಕ್ ಗಳಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಒಂದು ಬಿಡಿಗಾಸನ್ನೂ ಡೆಪಾಸಿಟ್ ಇಡುವುದಿಲ್ಲ. ಬದಲಾಗಿ ಕಮರ್ಷಿಯಲ್ ಬ್ಯಾಂಕಿನಲ್ಲಿ ಕರೆಂಟ್ ಎಕೌಂಟಿನಲ್ಲಿ ಇಡ್ತಾರೆ. ಸರ್ಕಾರಗಳು ಸಹಕಾರಿ ಬ್ಯಾಂಕುಗಳನ್ನು ನಂಬಿದರೆ ಕಮರ್ಷಿಯಲ್ ಬ್ಯಾಂಕ್ ಗಳ ಜೊತೆ ಪೈಪೋಟಿ ಮಾಡಬಹುದು ಎಂದರು.
ಎಲ್ಲಾ ಸವಾಲುಗಳ ನಡುವೆ ಸಹಕಾರಿ ಬ್ಯಾಂಕುಗಳ ಶಾಖೆಗಳು ಗ್ರಾಮ ಮಟ್ಟದಲ್ಲಿ ಸ್ಥಾಪನೆಯಾಗಬೇಕಿದೆ. ಆ ಮುಇಲಕ ಗ್ರಾಮೀಣ ಜನರ ಆರ್ಥಿಕ ಭದ್ರತೆಗೆ ಹೆಗಲು ಕೊಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ ವಹಿಸಿ ಪ್ರಾಸ್ತಾವಿಕ ಮಾತುಗಳ್ನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಎ.ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಇಂದ್ರಾಳಿ, ಮಂಗಳೂರು ದ.ಕ.ಜಿ.ಕೇ.ಸ.ಬ್ಯಾಂಕ್ ನಿರ್ದೇಶಕ ಐ.ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರಾದ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ, ಮಾಜಿ ಅಧ್ಯಕ್ಷ ರಾದ ರಾಮಣ್ಣ ಅಡಿಗ, ವೆಂಕಟ್ರಾಯ ನಾಯಕ್ ಸನ್ಮಾನಿಸಿ, ಗೌರವಿಸಲಾಯಿತು.
ಸಭಾಭವನ ನಿರ್ಮಾಣ ಮಾಡಿದ ಚಂದ್ರಶೇಖರ ನಾಯರಿ ಇವರನ್ನು ಈ ಸಂದರ್ಭ ಗೌರವಿಸಲಾಯಿತು. ನೂತನ ಸ್ವಸಹಾಯ ಸಂಘ “ನವರತ್ನ”, ಪಡಿತರ ಗೋದಾಮು, ನವರತ್ನ ಮಿನಿ ಸಭಾಂಗಣ, ಭದ್ರತಾ ಕೊಠಡಿ, ಅಧಿಕಾರಿಗಳ ಕೊಠಡಿ, ಕಡತಗಳ ಕೊಠಡಿ, ಕಂಪ್ಯೂಟರ್ ಉದ್ಘಾಟನೆಗೊಳಿಸಲಾಯಿತು.
ಉಡುಪಿ ಮಾಜಿ ಶಾಸಕ ಕೆ. ರಘಪತಿ ಭಟ್, ಉಡುಪಿ ತಾ.ವ್ಯ.ಉ.ಸಹಕಾರ ಮಾರಾಟ ಸಂಘದ ಅಧ್ಯಕ್ಷ ಬಿ.ಅಶೋಕ್ ಕುಮಾರ್ ಮೈರ್ಮಾಡಿ, ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜೇಶ್ ರಾವ್ ಪಾಂಗಳ, ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ., ಹಂದಾಡಿ ಗ್ರಾ.ಪಂ.ಅಧ್ಯಕ್ಷೆ ಶೋಭಾ ಪೂಜಾರಿ, ನಿರ್ದೇಶಕರಾದ ರಾಜೇಶ್ ಶೆಟ್ಟಿ ಬಿರ್ತಿ, ಗಣೇಶ್ ಪ್ತಸಾದ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಸದಾನಂದ ಪೂಜಾರಿ, ರಾಜೇಶ್ ಮರಕಾಲ, ಉಲ್ಲಾಸ್ ನಾಯಕ್, ನಳಿನಿ ಪ್ರದೀಪ್ ರಾವ್, ನಾಗವೇಣಿ ಪಂಡರಿನಾಥ್, ಸಂಜೀವ ನಾಯ್ಕ್, ಪ್ರಕಾಶ್, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.
ಬ್ರಹ್ಮಾವರ ಸೇವಾ ಸಹಕಾರಿ ಸಂಘದ ನಿರ್ದೇಶಕ ಜ್ಞಾನ ವಸಂತ ಶೆಟ್ಟಿ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್. ಸುಭಾಶ್ಚಂದ್ರ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.