ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಬೈಂದೂರು ದಸರಾ ಪ್ರಯುಕ್ತ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದ ದೇವಳದ ಮಾಜಿ ಆಡಳಿತ ಧರ್ಮದರ್ಶಿಗಳಾದ ಶ್ರೀ ಚನ್ನಕೇಶವ ಉಪಾಧ್ಯಾಯ ಇವರು ಮಾತನಾಡಿ ಬೈಂದೂರಿಗೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಇದೆ ವೈವಿಧ್ಯಮಯ ಪ್ರಾಕೃತಿಕ ಸ್ಥಳಗಳನ್ನು ಹೊಂದಿರುವ ಬೈಂದೂರು ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದೆ ಈ ಸಂದರ್ಭದಲ್ಲಿ ಬೈಂದೂರು ದಸರಾ ಮೂಲಕ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾರದೋತ್ಸವ ಹಾಗೂ ಬೈಂದೂರು ದಸರಾ ಸಮಿತಿಯ ಅಧ್ಯಕ್ಷರಾದ ಶ್ರೀ ದೀಪಕ್ ಕುಮಾರ್ ಶೆಟ್ಟಿ ವಹಿಸಿದ್ದರು
ಸರಕಾರಿ ಪದವಿ ಪೂರ್ವ ಕಾಲೇಜು, ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಿ ಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ರಥಬೀದಿ ಉಪ್ಪುಂದ ಶಾಲೆಗಳ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ರಾಜು ಪೂಜಾರಿ ,
ಯಡ್ತೆರೆ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ನಾಗರಾಜ ಶೆಟ್ಟಿ ಯಡ್ತರೆ ಗ್ರಾಮ ಪಂಚಾಯಿತಿನ ಮಾಜಿ ಸದಸ್ಯರಾದ ಗಿರೀಶ್ ಬೈಂದೂರು ಆನಂದ ಶೆಟ್ಟಿ ಉದ್ಯಮಿಗಳಾದ ವಿಠ್ಠಲ ಶೆಟ್ಟಿ ನಾಕಟ್ಟೆ ಸೋಡೀತಾರ್ ಸುಬ್ರಾಯ ಶೇರುಗಾರ್ ಕಾರ್ಯಕ್ರಮದ ಪ್ರಾಯೋಜಕರಾದ ಶರತ್ ಕುಮಾರ್ ಶೆಟ್ಟಿ ಕೋಶಾಧಿಕಾರಿ ಉಮೇಶ್ ದೇವಾಡಿಗ ಕಾರ್ಯದರ್ಶಿ ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.
ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳ್ನಾಡಿದರು. ಉದಯ ಆಚಾರ್ ಪ್ರಾರ್ಥಿಸಿದರು. ದಯಾನಂದ ಧನ್ಯವಾದ ಸಲ್ಲಿಸಿದರು. ಗಣಪತಿ ಹೋಬಳಿದಾರ್ ಮತ್ತು ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.