ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ :ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿವಾಜಿ ಸರ್ಕಾರಿ ಪದವಿಪೂರ್ವ ಕಾಲೇಜು ಹಳಿಯಾಳ ಕಾರವಾರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ
ಶ್ರೀಶ್ ಶೆಟ್ಟಿ ಬೆಳ್ಳಿಯ ಪದಕ, (125K.g ವಿಭಾಗ)ರೋಹಿತ್ ದೇವಾಡಿಗ(92 k.g ವಿಭಾಗ)ಕಂಚಿನ ಪದಕ,ಚೇತನ್ ಖಾರ್ವಿ(97 k.g ವಿಭಾಗ) ಕಂಚಿನ ಪದಕ, ಸಂಪತ್ ಕುಮಾರ್ ಶೆಟ್ಟಿ(87 k.g ವಿಭಾಗ) ಕಂಚಿನ ಪದಕ,ಅದ್ವಿತ್ ಆರ್.ಕೆ.ಕಂಚಿನ ಪದಕ(74K.g ವಿಭಾಗ) ಪಡೆದು ಸಾಧನೆ ಮೆರದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೊಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.