ಕಂಡ್ಲೂರು :ಲಂಚ ಪಡೆಯುತ್ತಿದ್ದ ಕಂಡ್ಲೂರು ಪಂ. ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

0
1463

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬಸವ ವಸತಿ ಯೋಜನೆಯ ಕೆಲಸಕ್ಕೆ ಕಂತು ಬಿಡುಗಡೆ ಮಾಡಲು ಹಣದ ಬೇಡಿಕೆ ಇರಿಸಿದ ಆರೋಪದಡಿ ತಾಲೂಕಿನ ಕಾವ್ರಾಡಿ ಪಂಚಾಯತಿಯ ಕಾರ್ಯದರ್ಶಿ ಗೋಪಾಲ ದೇವಾಡಿಗ ಎಂಬುವವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಸವ ವಸತಿ ಯೋಜನೆಯ ಕಂತು ಬಿಡುಗಡೆಗೊಳಿಸಲು ಜಾವೇದ್ ಕಾರ್ವಾಡಿ ಎಂಬುವವರಿಂದ, ಪಂಚಾಯತ್ ಕಾರ್ಯದರ್ಶಿ ಗೋಪಾಲ ದೇವಾಡಿಗ 15,000 ರೂ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಫಲಾನುಭವಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ಆರೋಪಿಯನ್ನು ಟ್ರಾಪ್ ಮಾಡಿ ಹಣ ಪಡೆಯುವ ವೇಳೆ ಬಂಧಿಸಿದ್ದಾರೆ.

Click Here

ಲೋಕಾಯುಕ್ತ ಎಸ್.ಪಿ ಸೈಮನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ಮಲ್ಲಿಕಾ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್, ಸತೀಶ್ ಆಚಾರ್ಯ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Click Here

LEAVE A REPLY

Please enter your comment!
Please enter your name here