ಕೋಟ :ಚಿತ್ರನಟ ದೊಡ್ಡಣ್ಣಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ ಕಾರ್ಯಕ್ರಮ

0
565

Click Here

ಪಂಚವರ್ಣದ ಸಾಮಾಜಿಕ ಕಾರ್ಯಕ್ಕೆ ಯಾವುದೇ ಪ್ರಶಸ್ತಿ, ಸನ್ಮಾನ ಅಗತ್ಯ ಇಲ್ಲ – ಎಸ್. ದೊಡ್ಡಣ್ಣ

ಕುಂದಾಪುರ ಮಿರರ್ ಸುದ್ದಿ…
ಕೋಟ: ಕನ್ನಡ ಚಿತ್ರರಂಗದಕ್ಕೆ ಕುಂದಗನ್ನಡಿಗರು ಅನನ್ಯವಾದ ಸೇವೆ ನೀಡಿದ್ದಾರೆ. ಮಾತ್ರವಲ್ಲದೆ ಹಿಂದಿ, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ವಿಶಿಷ್ಟ ಕೊಡುಗೆ ಈ ನೆಲದಿಂದ ಸಂದಿದೆ ಎಂದು ಕನ್ನಡ ಚಿತ್ರನಟ ಎಸ್.ದೊಡ್ಡಣ ತಿಳಿಸಿದರು.
ಅವರು ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ನ. 10ರಂದು ಕೋಟದ ಗಾಂಧೀ ಮೈದಾನದಲ್ಲಿ ನಡೆದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದಾಗ ಅದರ ಹುಟ್ಟು ಸಾರ್ಥಕವೆನಿಸಿಕೊಳ್ಳುತ್ತದೆ. ಅದೇ ರೀತಿ ಪಂಚವರ್ಣ ಸಂಘಟನೆ ತನ್ನ ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿಯಾಗಿದೆ ಎಂದರಲ್ಲದೆ ಅವರಿಗೆ ಯಾವುದೇ ಪ್ರಶಸ್ತಿ ಸನ್ಮಾನಗಳು ಅಗತ್ಯವಿಲ್ಲ ಅವುಗಳನ್ನು ಮೀರಿ ಬೆಳೆದ ಸಂಸ್ಥೆಯಾಗಿದೆ ಎಂದರು

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ಕಲೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಆ ಕಲೆಯನ್ನು ಗುರುತಿಸಿ, ಗೌರವಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ಆಗಬೇಕು. ಅಂತಹ ಕಾರ್ಯವನ್ನು ಪಂಚವರ್ಣದಂತಹ ಸಂಘಟನೆಗಳು ಮಾಡುತ್ತಿದೆ ಎಂದರು.

ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

Click Here

ಈ ಸಂದರ್ಭ ಈ ಸಂದರ್ಭ ಕನ್ನಡ ಚಿತ್ರನಟ ದೊಡ್ಡಣ್ಣ ಅವರಿಗೆ ಪಂಚವರ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ಲೀನ್ ತ್ರಾಸಿ ಮರವಂತೆ ತಂಡ ವಿಶೇಷ ಪುರಸ್ಕಾರ ಹಾಗೂ ರಂಗನಟ ಡಾ|ರಾಧಾಕೃಷ್ಣ ಉರಾಳ ವಿಶೇಷ ಅಭಿನಂದನೆ, ಸಮಾಜಸೇವಕಿ ಆಶಾ ವಿ. ರಾಮನಗರ ಅವರಿಗೆ ವಿಶೇಷ ಮಹಿಳಾ ಪುರಸ್ಕಾರ ನೀಡಲಾಯಿತು.

ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ, ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ನೀಡಲಾಯಿತು. ಈಜುಪಟು ದಿಗಂತ್.ಆರ್ ಕೋಟತಟ್ಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಜಯರಾಮ್ ಶೆಟ್ಟಿ ಮಣೂರು, ಶೈಕ್ಷಣಿಕ ಸಾಧಕಿ ಶ್ರೇಷ್ಠ ಮೊಹನ್ ಪೂಜಾರಿ ಹಾಗೂ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಉರಾಳ,ಅರಣ್ಯ ಇಲಾಖೆಯ ಶ್ರೀನಿವಾಸ್ ಜೋಗಿ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಅಜಿತ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಕೆ.ಪಿ.ಸಿ.ಸಿ. ವಕ್ತಾರ ಸುಧೀರ್ ಕುಮಾರ್ ಮುರೋಳಿ, ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಉದ್ಯಮಿ ಎಂ.ಸಿ.ಚಂದ್ರಶೇಖರ, ರಾಷ್ಟೀಯ ಮಾನವ ಹಕ್ಕು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ, ಅಖಿಲ ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ದೇವರಾಜ ಜೋಗಿ, ಶಿಕ್ಷಕ ನರೇಂದ್ರ ಕುಮಾರ್ ಕೋಟ, ಶಿವಿನ್ ಗ್ರೂಪ್ ನರೇಶ್ ಭಟ್,ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಮುಖ್ಯಸ್ಥ ಕೆ.ವಿ ರಮೇಶ್ ರಾವ್, ಸಂಘದ ಗೌರವಾಧ್ಯಕ್ಷ ಸತೀಶ್ ಎಚ್. ಕುಂದರ್, ಹೋಟೆಲ್ ಉದ್ಯಮಿ ವೆಂಕಟೇಶ್ ಪ್ರಭು,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣ ಗೌರವಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮೊದಲಾದವರಿದ್ದರು.

ಈ ಮೊದಲು ಪಂಚವರ್ಣದ ಕಛೇರಿಯಿಂದ ಎಸ್ ದೊಡ್ಡಣ್ಣ ಹಾಗೂ ಅಭಿನಂದಿತರನ್ನು ಚಂಡೆಯ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆತರಲಾಯಿತು.ಈ ಕಾರ್ಯಕ್ರಮದಲ್ಲಿ ಒರ್ವ ಬಡ ವಿದ್ಯಾರ್ಥಿಯನ್ನು ಸಂಸ್ಥೆ ದತ್ತು ಸ್ವೀಕರಿಸಿತು.

ಸಂಘದ ಕಾರ್ಯಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ, ಶಿಕ್ಷಕ ಸತೀಶ್ ಶೆಟ್ಟಿ, ಸಂತೋಷ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿ, ಸುಜಾತ ಬಾಯರಿ ವಂದಿಸಿದರು.ಉಪನ್ಯಾಸಕ ರಾಘವೇಂದ್ರ ತುಂಗ ಸಹಕರಿಸಿದರು.ಕಾರ್ಯಕ್ರಮದ ನಂತರ ಸ್ಥಳೀಯ ಅಂಗನವಾಡಿ ಪುಟಾಣಿ,ಮಯೂರಿ ನೃತ್ಯ ತಂಡ ಕುಂಭಾಶಿ,ಮಂಗಳೂರಿನ ಪ್ರಸಿದ್ಧ ನಾಟಕ ತಂಡದಿಂದ ನಾಟಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here