ಬೈಂದೂರು :ಹೆದ್ದಾರಿ ಡಿವೈಡರ್ ಏರಿ ಪಲ್ಟಿಯಾದ 407 ಲಾರಿ – ಚಾಲಕ ನಿರ್ವಾಹಕರಿಬ್ಬರೂ ಗಂಭೀರ

0
1316

ಕುಂದಾಪುರ ಮಿರರ್ ಸುದ್ದಿ…

Click Here

Click Here

ಕುಂದಾಪುರ: ಅತಿ ವೇಗವಾಗಿ ಬಂದ 407 ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಯಾಗಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ನುರ್ವಾಹಕರಿಬ್ಬರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಂದೂರು ಸಮೀಪದ ಉಪ್ಪುಂದ ಶಾಲೆಬಾಗಿಲು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಚಾಲಕನನ್ನು ನಾಯ್ಕನಕಟ್ಟೆ ನಿವಾಸಿ ವಿಶ್ವನಾಥ್ (32) ಎಂದು ಗುರುತಿಸಲಾಗಿದ್ದು, ಇನ್ನೊಬ್ಬನ ಬಗ್ಗೆ ಮಾಹಿತಿ ಲಭಿಸಿಲ್ಲ.

ಬೈಂದೂರಿನಿಂದ ಕುಂದಾಪುರ ಕಡೆಗೆ ಚಲಿಸುತ್ತಿದ್ದ ಲಾರಿ ಶಾಲೆಬಾಗಿಲು ಎಂಬಲ್ಲಿ ಬರುತ್ತಿದ್ದಂತೆ ತಿರುವು ಇರುವ ಸ್ಥಳಕ್ಕೆ ಸಮೀಪದಲ್ಲಿ ಹೆದ್ದಾರಿ ನಡುವೆ ಇರುವ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಎದುರಿನ ರಸ್ತೆಗೆ ಬಿದ್ದಿದೆ. ಈ ಸಂದರ್ಭ ಮಂಗಳೂರಿನಿಂದ ಬೆಳಗಾವಿಗೆ ಸರಕು ಸಾಗಿಸುತ್ತಿದ್ದ ಲಾರಿ ಬೈಂದೂರು ಕಡೆಗೆ ಚಲಿಸುತ್ತಿದ್ದು ಅದಕ್ಕೂ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 407 ಲಾರಿ ಚಾಲಕ ವಿಶ್ವನಾಥ ಹಾಗೂ ನಿರ್ವಾಹಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ 407 ಲಾರಿ ಸಂಪೂರ್ಣ ನುಚ್ಚು ಗುಜ್ಜಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here