ಕುಂದಾಪುರ: ಎಲ್ಲಾದರೂ ಇರಿ ಸಮಾಜದ ಬಗ್ಗೆ ಅಭಿಮಾನ ಗೌರವ ಹೊಂದಿರಿ – ಅಶೋಕ ಪೂಜಾರಿ ಬೀಜಾಡಿ

0
430

31ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಸಾಧಕರಿಗೆ ಸನ್ಮಾನ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಹೆಚ್ಚಿನ ಶಿಕ್ಷಣ ಪಡೆದವರು ಉದ್ಯೋಗಿಗಳಾಗಿ ಹೊರಹೋದರೆ ಎಸ್.ಎಸ್.ಎಲ್.ಸಿ, ಪಿಯುಸಿ ಫೇಲ್ ಆದವರು ಸಮಾಜದ ಏಳಿಗೆಗೆ ಸಂಘಟನೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ ಎಲ್ಲೇ ಇರಿ ಸಮಾಜದ ಬಗ್ಗೆ ಅಭಿಮಾನ, ಗೌರವ ಹೊಂದಿರಿ. ಸಮಾಜದ ಅಭಿವೃದ್ಧಿಗೆ ನಿಮ್ಮ ಕಾಣಿಕೆ ಇರಲಿ ಎಂದು ಅವಿಭಜಿತ ಕುಂದಾಪುರ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಹೇಳಿದರು.

ಅವರು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ (ರಿ.) ಇವರ ವತಿಯಿಂದ ಸಂಘದ ಸಭಾಂಗಣದಲ್ಲಿ ಭಾನುವಾರ ಕುಂದಾಪುರ – ಬೈಂದೂರು ತಾಲೂಕಿನ ವಿದ್ಯಾರ್ಥಿಗಳಿಗೆ ಕೊಡಮಾಡುವ 31ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಮತ್ತು ವಿಶೇಷ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಿಗಂಧೂರು ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ಇದರ ಕಾರ್ಯದರ್ಶಿ ರವಿಕುಮಾರ್ ಹೆಚ್.ಆರ್ ಅವರು ಬಿಲ್ಲವ ಸಮಾಜ 26 ಉಪ ಪಂಗಡಗಳನ್ನು ಹೊಂದಿದ್ದು ಹರಿದು ಹಂಚಿಹೋಗಿದೆ. ಈ ಎಲ್ಲ ಉಪಪಂಗಡಗಳು ಒಂದಾದರೆ ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆಯಲು ಸಾಧ್ಯವಿದೆ. ರಾಜಕೀಯವಾಗಿ ಸಮಾಜದ ಪ್ರಾಬಲ್ಯತೆ ಕಾಣಬೇಕು. ವೈಷಮ್ಯಗಳ ಮರೆತು ಸಮಾಜದ ಪರವಾಗಿ ನಿಲ್ಲಬೇಕು. ಯಾವುದೇ ಅಧಿಕಾರ, ಹುದ್ದೆಗಳು ಬಂದರೂ ಕೂಡಾ ಸಮಾಜದ ಬಗ್ಗೆ ಕಳಕಳಿಯನ್ನು ಮರೆಯಬಾರದು. ಸಮಾಜದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ನಂತಹ ಉನ್ನತ ವ್ಯಾಸಂಗದ ಗುರಿ ಹೊಂದಿರಬೇಕು. ಗುರುಗಳ ತತ್ವ ಸಿದ್ಧಾಂತವನ್ನು ಪಾಲಿಸಿಕೊಂಡು ಸಮಾಜ ಐಕ್ಯತೆಯಿಂದ ಸಮಗ್ರ ಅಭಿವೃದ್ಧಿಯ ಕಡೆಗೆ ಹೆಜ್ಜೆ ಇಡಬೇಕಾಗಿದೆ ಎಂದರು.

Click Here

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪ್ರೇಮಾನಂದ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರಾಮ ಪೂಜಾರಿ ಮುಲ್ಲಿಮನೆ, ಶಿವರಾಮ ಪೂಜಾರಿ ಬಸ್ರೂರು, ಶ್ರೀ ನಾರಾಯಣ ಗುರು ಮಹಿಳಾ ಕೋ-ಆಪರೇಟಿವ್ ಸೊಸೈಟಿ ನಿ., ಕುಂದಾಪುರ ಇದರ ಅಧ್ಯಕ್ಷೆ ಗುಣರತ್ನ ರಾಮ ಪೂಜಾರಿ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಪೂಜಾರಿ ಕೋಡಿ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲ್‍ಕಟ್ಟೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಪೊಲೀಸ್ ಶಂಕರ ಪೂಜಾರಿ ಕಾಡಿನತಾರು, ದೇಹದಾಡ್ರ್ಯ ಪಟು ಸುರೇಶ ಬಿ.ಪಾಂಡೇಶ್ವರ, ಪಿಎಚ್‍ಡಿ ಪದವಿಧರರಾದ ಡಾ.ಸೌಮ್ಯ ಕುಮಾರಿ ಉಪ್ಲಾಡಿ, ಡಾ.ಸಚಿನ್ ಉಪ್ಲಾಡಿ,ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕøತ ಚೆನ್ನಯ್ಯ ಪೂಜಾರಿ ಬೈಂದೂರು, ನ್ಯಾಯವಾದಿ ನಯನ ಅಸೋಡು, ಸಮಾಜಸೇವಕ ರಾಜು ಪೂಜಾರಿ ಜಡ್ಕಲ್, ಮಹಿಳಾ ಪ್ರಸಂಗಕರ್ತೆ ಶಾಂತಾ ವಾಸುದೇವ ಪೂಜಾರಿ ಅನಗಳ್ಳಿ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೀಕ್ಷಾ, ಛಾಯಾ ಸಿ ಪೂಜಾರಿ, ಅಮೂಲ್ಯ ಹಟ್ಟಿಯಂಗಡಿ, ಅಮೂಲ್ಯ ಮಾವಿನಕೊಂಬೆ, ಶ್ರಾವ್ಯ ಕಂಡ್ಲೂರು, ನಿರೀಕ್ಷಾ, ಧನ್ಯ ಮಾವಿನಕೊಂಬೆ, ಚಂದ್ರ ಎಸ್.ಕೆ ಸಿದ್ಧಾಪುರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಪೂಜಾರಿ ವಿಠಲವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಹಿಳಾ ಘಟಕದ ಕಾರ್ಯದರ್ಶಿ ಗುಲಾಬಿ ಜಯಸೂರ್ಯ ಪೂಜಾರಿ ಪ್ರಾರ್ಥನೆ ನೆರವೇರಿಸಿದರು. ಸತೀಶ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಪ್ರದಾನ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ವಂದಿಸಿದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Click Here

LEAVE A REPLY

Please enter your comment!
Please enter your name here