ಬ್ರಹ್ಮಾವರ :ಜಿಲ್ಲಾ ಸೌಹಾರ್ದ ಸಹಕಾರಿ ಕ್ರೀಡೋತ್ಸವ

0
190

ಕುಂದಾಪುರ ಮಿರರ್ ಸುದ್ದಿ…

ಬ್ರಹ್ಮಾವರ :ಸೋಲು, ಗೆಲುವಿಗಿಂತ ಭಾಗವಹಿಸುವಿಕೆ, ಕ್ರೀಡಾ ಸ್ಪೂರ್ತಿ ಮುಖ್ಯ ಎಂದು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಶನಿವಾರ ಹಂಗಾರಕಟ್ಟೆ ಚೇತನಾ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಂಟಿ ಆಶ್ರಯದಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ ಸೌಹಾರ್ದ ಸಂಭ್ರಮ-2023″ ಉದ್ಘಾಟಿಸಿ ಮಾತನಾಡಿದರು. ವರ್ಷವಿಡೀ ವ್ಯವಹಾರದ ಜಂಜಾಟದಲ್ಲಿ ತೊಡಗಿದ ಸಹಕಾರಿಗಳಿಗೆ ಕ್ರೀಡೆ ಚೈತನ್ಯದಾಯಕವಾಗಲಿ ಎಂದರು.

Click Here

Click Here

ಶಾಸಕ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಮಾತನಾಡಿ, ಕ್ರೀಡೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ. ಜತೆಗೆ ಒಗ್ಗಟ್ಟು, ಆರೋಗ್ಯಪೂರ್ಣ ವಾತಾವರಣ, ಮನೋಸ್ಥಿತಿಗೆ ಪೂರಕ ಎಂದರು. ದೇಶದ ಆರ್ಥಿಕತೆಗೆ ಸಹಕಾರಿ ಕೊಡುಗೆ ಅನನ್ಯ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ ಎಸ್.ಕೆ. ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ, ನಿರ್ದೇಶಕಿ ಭಾರತಿ ಜಿ.ಭಟ್, ಶಾಸಕ ಗುರುರಾಜ್ ಗಂಟಿಹೊಳೆ, ಎಸ್‍ಸಿಡಿಸಿಸಿ ನಿರ್ದೇಶಕ ರಾಜು ಪೂಜಾರಿ, ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ ಪಿ.ಎಸ್., ಕ್ರೀಡಾಕೂಟ ಸಂಚಾಲಕ ಅಶೋಕ್ ಪ್ರಭು ಸಾೈಬ್ರಕಟ್ಟೆ ಮೊದಲಾದವರಿದ್ದರು.
ಸೌಹಾರ್ದ ಸಹಕಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಸ್ವಾಗತಿಸಿ, ವಿಜಯ್ ವಂದಿಸಿದರು. ಸತೀಶ್ಚಂದ್ರ ಚಿತ್ರಪಾಡಿ ನಿರೂಪಿಸಿದರು.

ಕಾಪು, ಉಡುಪಿ, ಬ್ರಹ್ಮಾವರ, ಬೈಂದೂರು, ಹೆಬ್ರಿ, ಕಾರ್ಕಳ, ಕುಂದಾಪುರ ಈ ತಾಲೂಕುಗಳನ್ನು 7 ವಲಯಗಳನ್ನಾಗಿ ರಚಿಸಲಾಗಿತ್ತು. ಸಹಕಾರಿಯ ಆಡಳಿತ ಮಂಡಳಿ, ಸಿಬಂದಿ, ಸಿಬಂದಿಯೇತರರು ಸೇರಿದಂತೆ 2,000ಕ್ಕೂ ಅ„ಕ ಮಂದಿ ಸೌಹಾರ್ದ ಸಹಕಾರಿಗಳು ಕ್ರೀಡೋತ್ಸವದಲ್ಲಿ ಭಾಗವಹಿಸಿದರು. ಸಹಕಾರಿ ಸಾಧಕರಿಗೆ ಸಮ್ಮಾನ, ಪ್ರಶಸ್ತಿ ಪ್ರದಾನ ನೆರವೇರಿತು.

Click Here

LEAVE A REPLY

Please enter your comment!
Please enter your name here