ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕಾರ್ತಿಕ ಮಾಸದ ವಿಶೇಷ ಅವಸರದಲ್ಲಿ ಶನಿವಾರದಂದು ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಏಕಾಹ ಭಜನೆಗೆ ವೇದಮೂರ್ತಿ ಸುರೇಂದ್ರನಾಥ್ ಭಟ್ ಹಾಗೂ ಭಜನಾ ಮಂದಿರದ ಅಧ್ಯಕ್ಷ ಗೋಪಾಲಕೃಷ್ಣ ನಾಯಕರು ದೀಪ ಪ್ರಜ್ವಲನ ಮಾಡುವುದರ ಮುಖೇನ ಆರಂಭ ನೀಡಿದರು.
ಏಕಾಹ ಭಜನೆಯಲ್ಲಿ ಜಿಲ್ಲೆಯ ಜಿ ಎಸ್ ಬಿ ಸಮುದಾಯದ ಪ್ರಸಿದ್ಧ 15 ಕ್ಕೂ ಮಿಕ್ಕಿ ಮಂಡಳಿಗಳು ಭಾಗಿಯಾಗಿದ್ದವು. ಸಂಜೆ ವಿಜ್ರಂಭಣೆಯ ದೀಪೋತ್ಸವ ಜರುಗಿತು.
ಭಾನುವಾರ ನಡೆದ ವಾರ್ಷಿಕೋತ್ಸವದಲ್ಲಿ ಭಜನಾ ಮಂಗಳ, ಮಹಾಪೂಜೆಯ ಬಳಿಕ ಊರಿನ ಜಿ ಎಸ್ ಬಿ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂದಿರದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಿ. ಮಧುಸೂದನ ಕಾಮತರು ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ಪುರಸ್ಕರಿಸಿದರು.
ಇದೇ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಶ್ರೀ ರಾಮ ಭಜನಾ ಮಂದಿರದ ಏಳಿಗೆಗೆ ಹಗಲಿರುಳು ದುಡಿದ ಅಧ್ಯಕ್ಷ ಗೋಪಾಲಕೃಷ್ಣ ನಾಯಕರನ್ನು ಸನ್ಮಾನಿಸಲಾಯಿತು. ಮಂದಿರದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಮಧುಸೂದನ ಕಾಮತರು ತಮ್ಮ ಮಾತುಗಳಲ್ಲಿ ಅಂಪಾರು ಚಿಕ್ಕ ಊರಾದರು ಇಲ್ಲಿಯ ಜಿ ಎಸ್ ಬಿ ಸಮಾಜ ಬಾಂಧವರು ನಡೆಸುವ ಧಾರ್ಮಿಕ ಕಾರ್ಯಕ್ರಮಗಳು ಶ್ಲಾಘನೀಯ ಎಂದರು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಕಾರ್ಯದರ್ಶಿ ದೇವದಾಸ್ ಪ್ರಭು ಸ್ವಾಗತಿಸಿದರು, ಖಜಾಂಚಿ ರಘುವೀರ ಕಿಣಿ ವಂದಿಸಿದರು. ಶಿಕ್ಷಕ ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ದೇವರಿಗೆ ಅರ್ಪಿಸಿದ ಫಲ-ಪ್ರಸಾದದ ಏಲಂ ನಂತರ ಭಕ್ತಾದಿಗಳಿಗೆ ಮಹಾಸಂತರ್ಪಣೆ ನೆರವೇರಿತು.