ಸಂಘಟನೆಗಳು ಸಾಮಾಜಿಕ ಕಾರ್ಯಕ್ಕೆ ತುಡಿಯಬೇಕು – ಆನಂದ್ ಸಿ ಕುಂದರ್
ಕುಂದಾಪುರ ಮಿರರ್ ಸುದ್ದಿ…
ಕೋಟ: ಸಂಘಸಂಸ್ಥೆಗಳು ಸದಾ ಸಾಮಾಜಿಕ ಕಾರ್ಯದಲ್ಲಿ ತುಡಿಯಬೇಕು ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಬುಧವಾರ ಭಾರತೀಯ ಅಂಚೆ ಇಲಾಖೆ ಉಡುಪಿ, ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ, ಕೋಟ ಗ್ರಾಮಪಂಚಾಯತ್ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಸಹಯೋಗದೊಂದಿಗೆ ಅಂಚೆ ಜನಸಂಪರ್ಕ ಅಭಿಯಾನ ಬೃಹತ್ ಆಧಾರ್ ಮೇಳ, ಮತದಾರರ ಗುರುತಿಚೀಟಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸಮಸ್ಯೆಗಳ ತಿದ್ದುಪಡಿ ಅಭಿಯಾನಕಾರ್ಯಕ್ರಮದಲ್ಲಿ ಮಾತನಾಡಿ ಪಂಚವರ್ಣ ಸಂಸ್ಥೆ ಕ್ರೀಯಾಶೀಲ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ, ಗ್ರಾಮ ಆಡಳಿತವನ್ನು ವಿಶ್ವಾಸಕ್ಕೆ ಪಡೆದು ಅದರಂತೆ ಸಾಮಾಜಮುಖಿ ಕಾರ್ಯದಲ್ಲಿ ನಿರತರಾಗುತ್ತಿರುವುದನ್ನು ಪ್ರಶಂಸಿದರು.
ಭಾರತೀಯ ಅಂಚೆ ಇಲಾಖೆ ಉಡುಪಿ ಇದರ ಅಧೀಕ್ಷಕ ರಮೇಶ್ ಪ್ರಭು ಮಾತನಾಡಿ ಅಂಚೆ ಇಲಾಖೆ ಹಿಂದೆ ಇದ್ದ ವ್ಯವಸ್ಥೆಗೂ ಇಂದು ನೀಡುತ್ತಿರುವ ಸೇವೆ ಜನಮಾನದಲ್ಲಿ ಉಳಿದುಕೊಂಡಿದೆ, ಪ್ರತಿ ಸೌಲಭ್ಯಗಳನ್ನು ಮನೆ ಮನೆಗೆತಲುಪಿಸುವ ಕಾರ್ಯದಲ್ಲಿ ನಿರತರಾಗಿದೆ, ಜನಸಾಮಾನ್ಯ ಬಹುಮುಖ್ಯವಾದ ಆಧಾರ ತಿದ್ದುಪಡಿ ಇನ್ನಿತರ ಯೋಜನೆಗಳಿಗೆ ಸದಾ ಸ್ಪಂದಿಸುವ ಅಂಚೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕುಂದಾಪುರ ಅಂಚೆ ಇಲಾಖೆಯ ದಕ್ಷಿಣ ವಿಭಾಗದ ರಾಮಚಂದ್ರ, ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ದೇವಾಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಮಾಧವ ಪೈ, ಕೋಟ ಗ್ರಾಮಲೆಕ್ಕಿಗ ರಾಘವೇಂದ್ರ ಹಕ್ಲಾಡಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಕೋಟ ಅಂಚೆ ಕಛೇರಿಯ ಪೋಸ್ಟಮಾಸ್ಟರ್ ಜಯಪ್ರಕಾಶ್ , ಸಿಬ್ಬಂದಿವರ್ಗ ಮತ್ತಿತರ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಭಿಯಾನದಲ್ಲಿ 200ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದರು.