ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಿರಿಯ ರಂಗಭೂಮಿ ಕಲಾವಿದ, ರೂಪಕಲಾ ಕುಂದಾಪುರ ಸಂಸ್ಥೆಯ ಮೂರು ಮುತ್ತು ಖ್ಯಾತಿಯ ನಟ ಅಶೋಕ್ ಶ್ಯಾನುಭಾಗ್ (54ವರ್ಷ) ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ.
ಕುಂದಾಪುರದ ಪಟ್ಟಣ್ ಶೇಟ್, ಹುಲಿಮನೆ ದಿ.ನಾರಾಯಣ ಶ್ಯಾನುಭೋಗ್ ಹಾಗೂ ದಿ. ಕಸ್ತೂರಿ ಶ್ಯಾನುಭಾಗ್ ಅವರ ಪುತ್ರ ಅಶೋಕ್ ಶ್ಯಾನುಭೋಗ್ ಅವರು 1979ರಲ್ಲಿ ರೂಪಕಲಾ ಸಂಸ್ಥೆಯಲ್ಲಿ ಬಾಲ ಕಲಾವಿದರಾಗಿ ಸತ್ಯ ಹರಿಶ್ಚಂದ್ರ, ಟಿಪ್ಪು ಸುಲ್ತಾನ್ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಓದಿನ ಬಳಿಕ ನಿರಂತರವಾಗಿ ರಂಗಭೂಮಿ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು.
ಸ್ವ ಉದ್ಯೋಗ ಮಾಡಿಕೊಂಡಿದ್ದ ಅಶೋಕ್ ಅವರು ನಾಟಕವನ್ನೇ ಬದುಕಿನ ಭಾಗವಾಗಿಸಿಕೊಂಡಿದ್ದರು. ರೂಪಕಲಾ ಸಂಸ್ಥೆಯ ದಿ. ಬಾಲಕೃಷ್ಣ ಪೈ (ಕುಳ್ಳಪ್ಪು) ಅವರ ನೆಚ್ಚಿನ ಶಿಷ್ಯರಾಗಿದ್ದ ಅವರು ಕುಳ್ಳಪ್ಪು ಅವರ 53 ನಾಟಕಗಳಲ್ಲಿ ಹಾಗೂ ಸತೀಶ್ ಪೈ ಅವರ 11 ನಾಟಕ ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೂಪಕಲಾ ಸಂಸ್ಥೆಯ ನಾಟಕಗಳು ಕನ್ನಡ ಮತ್ತು ಕೊಂಕಣಿಯಲ್ಲಿ ಏಳು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಂಡಿದ್ದವು.