ಕುಂದಾಪುರ ಮಿರರ್ ಸುದ್ದಿ…
ಕೋಟ: ಸಂತಾನ ಭಾಗ್ಯ ಕರುಣಿಸುವ ಹಲವು ಮಕ್ಕಳ ತಾಯಿ ಕ್ಷೇತ್ರ ಎಂದೆ ಜನಜನಿತವಾದ ಕೋಟದ ಅಮೃತೇಶ್ವರಿ ದೇವಳದಲ್ಲಿ ಶರನ್ನವರಾತ್ರಿ ಅಂವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಲುವಾಗಿ ಚಂಡಿಕಾ ಸಪ್ತಸತಿ ಪಾರಾಯಣ,ದುರ್ಗಾಯಾಗ ವಿವಿಧ ಭಾಗಗಳ ಸೇವಾಕರ್ತರಿಂದ ಜರಗುತ್ತಿದ್ದು ಈ ನಡುವೆ ಪ್ರತಿಸಂಜೆ ಉಡುಪಿ ಜಿಲ್ಲೆ ಪ್ರಸಿದ್ಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿದೆ.
ಭಜನಾ ಕಾರ್ಯಕ್ರಮಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಚಾಲನೆ ನೀಡಿದರು .ಆ ಪ್ರಯುಕ್ತ ಸೋಮವಾರ ಬೈಕಾಡಿ ಶ್ರೀ ಕೃಷ್ಣ ಭಜನಾ ಮಂಡಳಿ ಇವರಿಂದ ವಿಶಿಷ್ಟ ನೃತ್ಯ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಸೋಮವಾರದ ಭಜನಾ ಸಂಯೋಜಕ ಭರತ ಗಾಣಿಗ ಕೋಟ,ವ್ಯವಸ್ಥಾಪನಾ ಸಮಿತಿ ಸದಸ್ಯ ಚಂದ್ರ ಪೂಜಾರಿ,ಜಿ.ಸತೀಶ್ ಹೆಗ್ಡೆ,ಇನ್ನಿತರರು ಉಪಸ್ಥಿತರಿದ್ದರು.