ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸೋಮವಾರ ಮುಂಜಾನೆ ಮಗುಚಿದ ಪರಿಣಾಮ, ಮೀನುಗಾರಿಕೆ ನಡೆಸುತ್ತಿದ್ದ ಮೂವರ ಪೈಕಿ ಇಬ್ಬರು ಸಾವಿಗೀಡಾಗಿ ಒಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರೂತು ಅಳ್ವೆಗದ್ದೆ ಬಂದರಿನಿಂದ 2ಕಿಮೀ ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ನಡೆದಿದೆ.
ಸಾವಿಗೀಡಾದವರನ್ನು ಶಿರೂರು ಗ್ರಾಮದ ಅಬ್ದುಲ್ ಸತ್ತಾರ್ (45) ಹಾಗೂ ಭಟದಕಳದ ಮೊಹಮ್ಮದ್ ಯೂಸುಫ್ ಮಿಸ್ಬಾ(49) ಎಂದು ಗುರುತಿಸಲಾಗಿದೆ. ಶಿರೂರು ಗ್ರಾಮದ ಬುಡ್ಡು ಮುಕ್ತಾರ್ (40) ಪ್ರಾಣಾಪಾಯದಿಂದ ಪಾರಾದವರು.
ಭಾನುವಾರ ರಾತ್ರಿ 9:30 ಗಂಟೆಗೆ ಬೀಬಿ ಅಸ್ಮಾ ಮಾಲಿಕತ್ವದ ನುಮೈರ್ ಅಜುಮ್ ಹೆಸರಿನ ನಾಡದೋಣಿಯಲ್ಲಿ ಇವರು ಮೀನುಗಾರಿಕರಗೆ ಹೊರಟಿದ್ದರು. ಶಿರೂರು ಅಳ್ವೇಗದ್ದೆ ಬಂದರಿನಿಂದ ಮೀನುಗಾರಿಕೆ ಅರಬ್ಬಿ ಸಮುದ್ರ ಹೊರಟು ಸುಮಾರು 2 ಕೀ.ಮಿ ದೂರ ಹೋಗಿ ಮೀನು ಗಾಳವನ್ನು ಹಾಕಿ ಎಳೆತ್ತಿರುವಾಗ ತಡರಾತ್ರಿ 1 ಗಂಟೆಗೆ ಸಮುದ್ರದ ಅಲೆಗೆ ಸಿಕ್ಕಿ ದೋಣಿ ಮುಗಿಚಿ ಬಿದ್ದು, ದೊಣಿಯಲ್ಲಿದ್ದ ಮೂವರು ಜನರು ಸಮುದ್ರ ನೀರಿಗೆ ಬಿದ್ದಿದ್ದು ಹತ್ತಿರವಿದ್ದ ದೋಣಿವರಾದ ಮಾಮ್ದು ಯಾಕೂಬ್ ಇವರ ರಕ್ಷಣೆ ಮಾಡಿ ಸಮುದ್ರ ನೀರಿನಿಂದ ಮೇಲೆ ಎತ್ತಿ ದೋಣಿಯಲ್ಲಿ ಶಿರೂರು ಗ್ರಾಮ ಕಳಿಹಿತ್ಲು ಸಮುದ್ರ ದಡಕ್ಕೆ ತಂದಿದ್ದಾರೆ.
ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಬ್ಬರು ಮೃತಪಟ್ಟಿತುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಮೃತದೇಹಗಳನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಿದ್ದು , ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.