ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:ಡಿ.18; ಕಟ್ಟಡ ಕಲ್ಯಾಣ ಮಂಡಳಿ ಗಂಭೀರ ಕಾಯಿಲೆಗೊಳಗಾದ ಕಟ್ಟಡ ಕಾರ್ಮಿಕರಿಗೆ ಅತೀ ಕಡಿಮೆ ವೈದ್ಯಕೀಯ ವೆಚ್ಚ ನೀಡುತ್ತಿದೆ ಆದರೆ ಖಾಸಗಿ ಆಸ್ಪತ್ರೆಗಳಿಗೆ ತಪಾಸಣೆ ಮಾಡಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ ಇದು ಕಾರ್ಮಿಕರಿಗೆ ಮಾಡುವ ಅನ್ಯಾಯ ಈ ತಪಾಸಣೆ ಎಲ್ಲಾ ನೈಜ ಕಾರ್ಮಿಕರು ಬಹಿಷ್ಕರಿಸಬೇಕು ಮಂಡಳಿ ಈ ತೀರ್ಮಾನ ವಾಪಾಸ್ಸು ಪಡೆದು ಈಗಿರುವ ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಬೇಕು ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಅವರು ಹೇಳಿದರು.
ಅವರು ಗಂಗೊಳ್ಳಿ ಗ್ರಾಮ ಪಂಚಾಯಿತಿ ಎದುರುಗಡೆ ಸೋಮವಾರ ನಡೆಸಿದ ಕಟ್ಟಡ ಕಾರ್ಮಿಕರ ಪ್ರತಿಭಟನಾ ಸಭೆಯಲ್ಲಿ ಹೇಳಿದರು.
ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಮಾತನಾಡಿ;ಕಟ್ಟಡ ಕಾರ್ಮಿಕರು ಕೆಲಸ ಸಮಯದಲ್ಲಿ ಅಪಘಾತಗಳಲ್ಲಿ ಮೂಳೆ ಮುರಿತವಾದರೆ ಇನ್ನೀತರ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ಜು ಒಳರೋಗಿಯಾಗಿ ದಾಖಲಾಗದಿದ್ದರೂ ಮಂಡಳಿಯು ಚಿಕೆತ್ಸೆ ವೆಚ್ಚ ಭರಿಸಬೇಕು ಅನಗತ್ಯವಾಗಿ ಖರ್ಚು ಮಾಡುತ್ತಿರುವ ಆರೋಗ್ಯ ತಪಾಸಣೆ ನಮ್ಮ ಕಟ್ಟಡ ಕಾರ್ಮಿಕರು ಬಹಿಷ್ಕರಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಮಿಕರ ತಪಾಸಣೆ ಮಾಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಗಂಗೊಳ್ಳಿ ಘಟಕದ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಬೇಕು, ತಿರಸ್ಕ್ರತವಾದ ಪಿಂಚಣಿ ಪುರಸ್ಕರಿಸಬೇಕು, ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಕೂಡಲೇ ಕ್ರಮ ವಹಿಸಬೇಕು ಎಂಬ ಮನವಿಯನ್ನು ರಾಜ್ಯ ಸರ್ಕಾರದ ಕಾರ್ಮಿಕ ಮಂತ್ರಿಗೆ ಪಂಚಾಯತ್ ಮೂಲಕ ಮನವಿ ನೀಡಲಾಯಿತು.
ಘಟಕದ ಕೋಶಾಧಿಕಾರಿ ಅಭಿನಂದನ್ ಅವರು ವಂದಿಸಿದರು.