ಕೋಟೇಶ್ವರ :ಕೆಟ್ಟು ನಿಂತ ಲಾರಿಗೆ ಕಾರು ಡಿಕ್ಕಿ – ಒಬ್ಬ ಸಾವು, ನಾಲ್ಕು ಜನ ಗಂಭೀರ

0
915

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಸರಕು ತುಂಬಿದ ಟ್ರಕ್ಕಿಗೆ ಹಿಂದಿನಿಂದ ಬಂದ ಫಿಗೋ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಉದ್ಯಾವರ ಸಂಪಿಗೆನಗರದ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ, ಐಸಿವೈಎಂ ಅಧ್ಯಕ್ಷ ಜೋಯಿಸ್ಟನ್ ಕ್ಯಾಸ್ಟಲಿನೋ(22) ಮೃತಪಟ್ಟು, ಉಳಿದ ನಾಲ್ಕು ಜನ ಗಂಭೀರ ಗಾಯಗೊಂಡ ಘಟನೆ ಬುಧವಾರ ತಡ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟೇಶ್ವರದಲ್ಲಿ ನಡೆದಿದೆ.

Click Here

Click Here

ಗಾಯಗೊಂಡವರನ್ನು ಲೆಸ್ಟನ್ ಪಿಂಟೋ(22), ಜಸ್ಟಿನ್ ಕರ್ಡೋಜ (22), ವಿಲ್ಸನ್ ಮಾರ್ಟಿಸ್(23), ಗ್ಲಾಡ್ಸನ್ ಡಿಸಿಲ್ವ (23) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದವರು ಕುಂದಾಪುರದಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಉಡುಪಿ ಕಡೆ ಬರುತ್ತಿದ್ದರು. ರುವಾಗ ಕೋಟೇಶ್ವರ ಬಳಿ ಕೆಟ್ಟು ನಿಂತಿದ್ದ ಟ್ರಕ್ಗೆ ಫಿಗೋ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಟ್ರಕ್ಕಿನ ಹಿಂಬದಿಗೆ ನುಗ್ಗಿ ಸಂಪೂರ್ಣ ಜಖಂ ಆಗಿದೆ. ಎಲ್ಲರೂ ಐಸಿವೈಎಂ ಘಟಕದ ಸದಸ್ಯರು ಎಂದು ತಿಳಿದುಬಂದಿದೆ. ಕುಂದಾಫುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here