ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಆಶ್ರಯದಲ್ಲಿ ರೈತ ದಿನಾಚರಣೆಯ ಅಂಗವಾಗಿ ಸಾಧಕ ಕೃಷಿಕ ಸದಸ್ಯರಿಗೆ ಸನ್ಮಾನ ಹಾಗೂ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮ ಶನಿವಾರ ಕೋಟ ಸಿ.ಎ ಬ್ಯಾಂಕ್ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವ್ಯವಸಾಯಕ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ವಹಿಸಿದ್ದರು.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಟಿ ಸೀತಾರಾಮ ಸೋಮಯಾಜಿ ಉದ್ಘಾಟಿಸಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಕೋಟ ಸಹಕಾರಿ ಸಂಘ ಸಾಕಷ್ಟು ದೊಡ್ಡ ಸಾಧನೆಗಳನ್ನು ಮಾಡಿದೆ. ಈ ಸಂಘದಲ್ಲಿ ಜನಸಾಮಾನ್ಯರದೊಂದಿಗೆ ವ್ಯವಹರಿಸುವ ರೀತಿ ಇತರ ಸಂಘಗಳಿಗೆ ಮಾದರಿಯಾಗಿದೆ. ಜನಸ್ನೇಹಿ ಕೃಷಿ ಪತ್ತಿನ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಿ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಇದು ಶ್ಲಾಘನಾರ್ಹ ಸಂಘವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಪ್ರಕಾಶ್ ಶೆಟ್ಟಿ, ನರಸಿ ಪೂಜಾರಿ, ಸೀತಾರಾಮ ಶೆಟ್ಟಿ, ಸುಲೋಚನಾ,ಶೇಖರ್ ಪೂಜಾರಿ, ಕಾವೇರಿ, ರವಿ ಮಯ್ಯ, ಉಮೇಶ್ ಕಾರ್ಕಡ, ಶೋಭಾ ಐತಾಳ್, ಗೋಪಾಲ್ ಪಡುಕರೆ, ಗೋಪಿ ದೇವಾಡಿಗ, ಸುಶೀಲ ಶೆಡ್ತಿ, ವಿವಿಧ ಕ್ಷೇತ್ರದ ಸಾಧಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಜಯರಾಮ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕೃಷ್ಣಮೂರ್ತಿ ಉರಾಳ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನರೇಂದ್ರ ಕುಮಾರ್ ಕೋಟ ಇವರುಗನ್ನು ಸನ್ಮಾನಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕೋಟ ಸಿ ಎ ಬ್ಯಾಂಕ್ ಮಾಜಿ ನಿರ್ದೇಶಕ ಸುರೇಂದ್ರ ಹೆಗ್ಡೆ, ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ ಕೊಯ್ಕೂರು ಸಾಧಕರನ್ನು ಗೌರವಿಸಿದರು.
ಸಂಘದ ಉಪಾಧ್ಯಕ್ಷ ರಾಜೀವ ದೇವಾಡಿಗ, ನಿರ್ದೇಶಕರಾದ ರವೀಂದ್ರ ಕಾಮತ್ , ಪ್ರೇಮ, ಗೀತಾ ಎಸ್ ಪೂಜಾರಿ, ಮಹೇಶ್ ಶೆಟ್ಟಿ, ನಾಗರಾಜ್ ಹಂದೆ, ರಾಜೇಶ್ ಉಪಾಧ್ಯ, ರಂಜೀತ್ ಕುಮಾರ್, ಅಚ್ಯುತ್ ಪೂಜಾರಿ ಮತ್ತಿತರರು ಇದ್ದರು.
ನಿರ್ದೇಶಕ ಟಿ ಮಂಜುನಾಥ್ ಗಿಳಿಯಾರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬ್ಯಾಂಕ್ ಸಿಬ್ಬಂದಿ ಸಂಧ್ಯಾ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.