ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ: ಸಾಮಾನ್ಯ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಪೂರಕವಾದ ಬ್ಯಾಂಕ್ ಸಹಕಾರಿಯಾಗಲಿದೆ. ಈ ಭಾಗದ ಜನರ ಎಲ್ಲಾ ಬೇಡಿಕೆಗಳನ್ನು, ಅವಶ್ಯಕತೆಯನ್ನು ಪೂರೈಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವರು ಹುಣ್ಸೆಮಕ್ಕಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ವಿನಾಯಕ ಟವರ್ಸ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಯೂನಿಯನ್ ಬ್ಯಾಂಕ್ ಇದರ ನೂತನ ಶಾಖೆಯನ್ನು ಉದ್ಘಾಟಿಸಿ ಗ್ರಾಮಂತರ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಬೆಳಗಬೇಕಾದರೆ ಉತ್ಕೃಷ್ಟ ಸೇವೆ ನೀಡಬೇಕಾದ ಅವಶ್ಯಕತೆ ಇದೆ ಎಂದರು.
ಶ್ರೀ ವಿನಾಯಕ ಟವರ್ಸ ನೂತನ ಕಟ್ಟಡದ ಮೊದಲ ಮಹಡಿಯನ್ನು ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಕೃತ ಬ್ಯಾಂಕ್ ಗಳ ಸಿಬ್ಬಂದಿ ಕನ್ನಡ ಕಲಿತು ಜನಸಾಮಾನ್ಯರ ಸನಿಹಕ್ಕೆತೆರಳುವ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್ ಕಿರಣ್ ರೈ.ಜಿ. ನೂತನ ಶಾಖೆಯ ನಾಮಫಲಕವನ್ನು ಅನಾವರಣಗೋಳಿಸಿದರು.
ಈ ಸಂದರ್ಭದಲ್ಲಿ ಹೊಂಬಾಡಿ ಮಂಡಾಡಿ ಗ್ರಾ.ಪಂ.ಅಧ್ಯಕ್ಷ ಸತೀಶ್ ಮಡಿವಾಳ, ಸುಣ್ಣಾರಿ ಎಂ.ಎಂ.ಹೆಗ್ಡೆ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಹುಣ್ಸೆಮಕ್ಕಿ ಶಾಖೆಯ ಶಾಖ ಪ್ರಬಂಧಕರು ಅರುಣ್ ಕುಮಾರ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಹೆಚ್.ಟಿ.ವಾಸಪ್ಪ, ಜಗನ್ನಾಥ, ಶ್ರೀ ವಿನಾಯಕ ಟವರ್ಸ ಕಟ್ಟಡದ ಮಾಲಕರಾದ, ಕ್ಲಾಸ್ ೧ ಪಿ.ಡಬ್ಲ್ಯೂ ಡಿ. ಕಂಟ್ರಾಕ್ಟರ್ ಚಂದ್ರಶೇಖರ್ ಶೆಟ್ಟಿ ಮರಾತೂರು ಮತ್ತು ಮೈತ್ರಿ ಸಿ.ಶೆಟ್ಟಿ, ಅನ್ಯಿ ಸಿ.ಶೆಟ್ಟಿ ಉಪಸ್ಥಿತರಿದ್ದರು.
ಕಟ್ಟಡ ವಿನ್ಯಾಸದ ಇಂಜಿನಿಯರ್ ಗಣೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್ ಕಿರಣ್ ರೈ.ಜಿ. ಮತ್ತು ಸತ್ಯವತಿ ರೈ ಅವರನ್ನು ಸನ್ಮಾನಿಸಲಾಯಿತು.
ನವೀನ್ ಅಮಾನ, ಮಂಜುಳ ದೇವಿ,ಸುರೇಖಾ ಪ್ರಾರ್ಥಿಸಿದರು. ಎಮ್.ವಿ.ಬಾಲಸುಬ್ರಹ್ಮಣ್ಯ ಸ್ವಾಗತಿಸಿದರು. ರೋಜಲಿನ್ ರೋಡ್ರೀಗಸ್ ವಂದಿಸಿದರು. ಸಂದೇಶ ಶೆಟ್ಟಿ ಸಳ್ವಾಡಿ ಕಾರ್ಯಕ್ರಮ ನಿರೂಪಿಸಿದರು.