ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ
ಕುಂದಾಪುರ ಮಿರರ್ ಸುದ್ದಿ…
ಕೋಟ: ಪುರಾಣ ಪ್ರಸಿದ್ಧ ಕೋಟದ ಮಹತೋಭಾರ ಹಿರೇ ಮಹಾಲಿಂಗೇಶ್ವರ ಸನ್ನಿದಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಶಾಂತಿಮತೀ ಪ್ರತಿಷ್ಠಾನ ಹಂದಾಡಿ ಬ್ರಹ್ಮಾವರ ಇವರು ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡ ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಧಾರ್ಮಿಕ ಕಾರ್ಯಕ್ರಮ ಗುರುವಾರ ವಿದ್ಯುಕ್ತವಾಗಿ ಚಾಲನೆಗೊಂಡಿತು.
ನೂರಾರು ಬ್ರಹ್ಮ ಸಮುದಾಯ ಹಾಗೂ ನೆರದಿದ್ದ ಭಕ್ತಮಹಾಶಯರ ನಡುವೆ ದೇವತಾ ಪ್ರಾರ್ಥನೆಯೊಂದಿಗೆ ದ್ವಾದಶ ನಾಳೀಕೆರ, ಮಹಾಗಣಪತಿ ಹೋಮ,ನವಗ್ರಹ ಹೋಮ,ಮುಲ್ಲೆ ಮಹಾಗಣಪತಿ ದೇವರಿಗೆ ರಂಗಪೂಜೆ, ದುರ್ಗಾಪರಮೇಶ್ವರಿಗೆ ದುರ್ಗಾಹೋಮ ಮಹಾಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಮಹಾಪೂಜೆ ಪ್ರಸಾದ ವಿತರಣೆ , ಸಂಜೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗಲದಿಂದ ಸ್ತಬ್ದ ಚಿತ್ರಗಳೊಂದಿಗೆ ಕುಣಿತ ಭಜನೆ, ಡೊಳ್ಳು ಕುಣಿತ, ಚಂಡೆವಾದ್ಯಗಳೊಂದಿಗೆ ಗಾಯಿತ್ರೀ ದೇವಿಯ ಪುರಮೆರವಣಿಗೆ ಶೋಭಾಯಾತ್ರೆ ವಿಶೇಷವಾಗಿ ಗಮನ ಸೆಳೆಯಿತು. ಇದಾದ ನಂತರ ಯಾಗಶಾಲೆ ಪ್ರವೇಶ ಮಂಟಪ ಸಂಸ್ಕಾರ,ಅರಣಿ ಮಥನ ಪೂರ್ವಕ ಅಗ್ನಿ ಜನನಹೋಮ, ಯಂತ್ರಾರಾಧನೆ, ಕಲಶಸ್ಥಾಪನೆ ಮಹಾಪೂಜೆ, ಅಷ್ಟಾವಧಾನ ಸೇವೆ ಪ್ರಸಾದ ವಿತರಣಾ ಕಾರ್ಯಕ್ರಮಗಳು ಜರಗಿದವು.
ವೇ.ಮೂ.ಸೌಕೂರು ಚಂದ್ರಶೇಖರ್ ಅಡಿಗ ನೇತ್ರತ್ವದಲ್ಲಿ ಗುರುವಾರದ ಧಾರ್ಮಿಕ ಕೈಂಕರ್ಯಗಳು ನೆರವೆರಿತು. ಧಾರ್ಮಿಕ ವಿಧಿವಿಧಾನದಲ್ಲಿ ಮಹಾಯಾಗ ಸಮಿತಿಯ ಅಧ್ಯಕ್ಷ ವಿದ್ವಾನ್ ಡಾ. ವಿಜಯ್ ಮಂಜರ್ ದಂಪತಿಗಳು ಭಾಗಿಯಾದರು.
ಶ್ರೀ ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ, ಬ್ರಹ್ಮಸಮುದಾಯದ ಶಿವರಾಮ ಉಡುಪ, ರಾಜರಾಮ್ ಐತಾಳ್, ಶ್ರೀನಿವಾಸ್ ಅಡಿಗ, ಗಣೇಶ್ ಭಟ್, ದಯಾನಂದ ವಾರಂಬಳ್ಳಿ, ರಾಮಚಂದ್ರ ಉಡುಪ, ಉಮೇಶ್ ಬಾಯರಿ, ನಾಗಭೂಷಣ ಐತಾಳ್, ಮಂಜುನಾಥ್ ಉಡುಪ, ಹರೀಶ್ ಅಡಿಗ, ಪ್ರವೀಣ್ ಉಡುಪ, ಸುಬ್ರಹ್ಮಣ್ಯ ಭಟ್ ಸಾಸ್ತಾನ, ಪ್ರಸನ್ನ ಭಟ್ ಮತ್ತಿತರರು ಉಪಸ್ಥಿತರಿದರು.