ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 10 ಲಕ್ಷ ರೂಪಾಯಿ ಸಹಾಯಧನದ ಡಿಡಿ ಉಡುಪಿ ತಾಲೂಕಿನ ಪುತ್ತಿಗೆ ಮಠದ ಪರ್ಯಾಯಕ್ಕೆ ಹಸ್ತಾಂತರಿಸಲಾಯಿತು. ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಅವರು ಸ್ವಾಮೀಜಿಯವರಿಗೆ ಡಿಡಿ ಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಸತ್ಯನಂದ ನಾಯಕ್, ಜಿಲ್ಲಾ ಜನ ಜಾಗೃತಿ ಸಮಿತಿಯ ಸದಸ್ಯ ಶಿವಕುಮಾರ್, ಭಜನ್ ಪರಿಷತ್ ಉಪಾಧ್ಯಕ್ಷೆ ವಜ್ರಾಕ್ಷಿ, ವಲಯ ಅಧ್ಯಕ್ಷೆ ಗೀತಾ, ಯೋಜನಾಧಿಕಾರಿಗಳು, CSC ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಸೇವಾಪ್ರತಿನಿಧಿ ಉಪಸ್ಥಿತರಿದ್ದರು.