ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಂಡ್ಸೆ ಬ್ಲಾಕ್ ಕಿಸಾನ್ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿ ವಂಡ್ಸೆ ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷ ಗೋವರ್ಧನ್ ಜೋಗಿ ಅವರು ಆಯ್ಕೆಯಾಗಿದ್ದು ಅವರ ಪದಪ್ರದಾನ ಕಾರ್ಯಕ್ರಮ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ವಂಡ್ಸೆ ಬ್ಲಾಕ್ ಕಿಸಾನ್ ಕಾಂಗ್ರೆಸ್‍ನ ನಿಕಟಪೂರ್ವ ಅಧ್ಯಕ್ಷರಾ ನಾಗಪ್ಪ ಕೊಠಾರಿಯವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂಡ್ಸೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ವಹಿಸಿದ್ದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್‍ನ ಅಧ್ಯಕ್ಷ ಎಲ್ಲೂರು ಶಶಿಧರ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ವಾಸುದೇವ ಯಡಿಯಾಳ, ಶೇಖರ್ ಕೋಟ್ಯಾನ್, ಉದಯ್ ಹೇರೂರು, ಭಾಸ್ಕರ್ ಶೆಟ್ಟಿ ಕುಂದಾಪುರ, ರೋಷನ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಉದಯ್ ಜಿ ಪೂಜಾರಿ, ರವಿ ಗಾಣಿಗ ಅಜ್ರಿ, ಶ್ರೀನಿವಾಸ ಪೂಜಾರಿ ಕಲ್ಮಾಡಿ, ಕಾಳಿಂಗ ಶೆಟ್ಟಿ, ಕಾವ್ರಾಡಿ ಸುಧಾಕರ್ ಶೆಟ್ಟಿ ಹಕ್ಲಾಡಿ, ರಮೇಶ್ ಪೂಜಾರಿ ವಂಡ್ಸೆ, ಗುಂಡು ಪೂಜಾರಿ ಹರಾವರಿ, ಮಂಜು ಕೊಠಾರಿ ಕೆರಾಡಿ, ರಘುರಾಮ್ ಶೆಟ್ಟಿ ಅಜ್ರಿ ಉಪಸ್ಥಿತರಿದ್ದರು.