ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹಬ್ಬ ಮತ್ತು ಉತ್ಸವಕ್ಕೆ ವ್ಯತ್ಯಾಸವಿದೆ. ಹಬ್ಬ ಎಂದರೆ ತಿಂಡಿ ತಿನಿಸು ಮಾರಾಟ ಮಳಿಗೆ ಖರೀದಿಗಳು ಅವಕಾಶ ಇರುತ್ತದೆ. ಉತ್ಸವ ಎಂದರೆ ಅದು ದೇವಸ್ಥಾನದ ಒಳಗಡೆ ದೇವರಿಗೆ ನಡೆಯುವ ಪೂಜೆ ಪುನಸ್ಕಾರ ಇತ್ಯಾದಿಗಳು. ಪೋಷಕರಿಗೆ, ಸಾರ್ವಜನಿಕರಿಗೆ ವಾರ್ಷಿಕೋತ್ಸವ, ಮಕ್ಕಳಿಗೆ ಹಬ್ಬ. ಪ್ರತೀ ವರ್ಷ ಕೂಡಾ ಶಾಲಾ ವಾರ್ಷಿಕೋತ್ಸವನ್ನು ಆಯೋಜಿಸುವ ಮೂಲಕ ಮಕ್ಕಳ ಹಬ್ಬವನ್ನು ಆಚರಿಸಬೇಕು. ಇದಕ್ಕೆ ಊರವರ ಸಹಕಾರವೂ ಅಗತ್ಯ ಎಂದು ಉದ್ಯಮಿ, ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೇಳಿದರು.
ಡಿ.28ರಂದು ಜರಗಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇದರ 109ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿವೆ. ಸಂಸ್ಕøತಿ, ಸಾಂಸ್ಕøತಿಕ ಮೌಲ್ಯಗಳ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವಲ್ಲಿ ಇಂತಹ ಹೊಸತನದ ಅಗತ್ಯತೆ ಇರುತ್ತದೆ. ಎಲ್ಲರೂ ಒಗ್ಗಟ್ಟಿನಲ್ಲಿ ಸರ್ಕಾರಿ ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಶ್ರಮಿಸೋಣ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅವಿನಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋವರ್ದನ್ ಜೋಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ಉದಯಕುಮಾರ್ ಶೆಟ್ಟಿ, ಪ್ರಶಾಂತ ಪೂಜಾರಿ, ಶಶಿಕಲಾ ಎಸ್., ಸುಶೀಲ, ಸುಬ್ಬು, ಬೈಂದೂರು ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಸೀತರಾಮ ಶೆಟ್ಟಿ ತೊಂಭತ್ತು, ರೋಟರಿ ಜಿಲ್ಲೆ 3182 ಇದರ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ, ನ್ಯಾಯವಾದಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಚಾರ್ಟೆಡ್ ಅಕೌಂಟೆಂಟ್ ಸಿ.ಎ ರಾಜೇಶ್ ಶೆಟ್ಟಿ ನಂದ್ರೋಳಿ ಸೋಡಿಗದ್ದೆ, ದುರ್ಗಾಶ್ರೀ ಎಂಟರ್‍ಪ್ರೈಸಸ್ ವಂಡ್ಸೆ ಇದರ ನಿಶ್ಚಿತ್ ಶೆಟ್ಟಿ ಹೆಗ್ಗುಂಜೆ ಮಂದರ್ತಿ, ವಿದ್ಯಾರ್ಥಿ ನಾಯಕರಾದ ಆದಿತ್ಯ, ಶರಣ್ಯ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಆಶಾ ಆವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಗುಂಡು ಎಸೆತ ಮತ್ತು ಚಕ್ರಾ ಎಸೆತ ಸ್ಪರ್ಧೆಯಲ್ಲಿ ಬಂಗಾರದ ಪದಕದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶರಣ್ಯ , ಮೈಸೂರು ವಿಭಾಗ ಮಟ್ಟದ ಕಬ್ಬಡ್ಡಿ ಪಂದ್ಯಾಟಕ್ಕೆ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಶಾಲಾ ವಿದ್ಯಾರ್ಥಿಗಳಾದ ಶರಣ್ಯ, ಶಿರೀಶ, ಶ್ರದ್ದಾ, ಮಾನ್ವಿತಾ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕವನ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಶ್ವಾಸ್ ಹಾಗೂ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿದ ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳಿಗೆ ಆಯೋಜಿಸಿದ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ನಾಗವೇಣಿ, ವಾಣಿಶ್ರೀ, ಅಂಬಿಕಾ ಶೆಟ್ಟಿ ವಿಜೇತರ ಯಾದಿ, ಶಿಕ್ಷಕಿ ಶೈಲಾಶ್ರೀ ಸನ್ಮಾನ ಪತ್ರ ವಾಚಿಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಡಾ|| ಪೂರ್ಣಿಮಾ ಟಿ, ಸ್ವಾಗತಿಸಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಸದಾಶಿವ ವರದಿ ವಾಚಿಸಿದರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂದೇಶ್ ಶೆಟ್ಟಿ ವಂದಿಸಿದರು. ಸಹಶಿಕ್ಷಕರಾದ ಪ್ರತಾಪ ಶೆಟ್ಟಿ, ಇಂದಿರಾ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕøತಿಕ ಕಾರ್ಯಕ್ರಮವಾಗಿ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಸಂಜೆ, ಶಾಲಾ ಪುಟಾಣಿಗಳಿಂದ ನೃತ್ಯ ಸಿಂಚನ, ವಿದ್ಯಾರ್ಥಿಗಳಿಂದ ವೈವಿದ್ಯಮಯ ನೃತ್ಯ ವೈಭವ, ಶಾಲಾ ವಿದ್ಯಾರ್ಥಿಗಳಿಂದ ನವ್ಯ ಶೈಲಿಯ ನಾಟಕ ‘ಕುಣಿ ಕುಣಿ ನವಿಲೆ’ ಪ್ರದರ್ಶನಗೊಂಡಿತು. ಅಪರೂಪದ ಜಾನಪದ ನೃತ್ಯಗಳನ್ನು ವಿದ್ಯಾರ್ಥಿಗಳು ಅಧ್ಭುತವಾಗಿ ಪ್ರದರ್ಶಿಸಿದರು.
ಮಕ್ಕಳದ್ದೇ ನಿರ್ವಹಣೆ
ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ/ನಿಯರೆ ನಿರ್ವಹಿಸಿದ್ದು ವಿಶೇಷವಾಗಿತ್ತು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ವಿದ್ಯಾರ್ಥಿಗಳು ವೇದಿಕೆಯಲ್ಲಿ ನಿಂತು ಪ್ರಬುದ್ಧ ನಿರೂಪಕರಂತೆ ಕಾರ್ಯಕ್ರಮ ನಿರ್ವಹಿಸಿ ಭೇಷ್ ಎನಿಸಿಕೊಂಡರು. ಸುಮಾರು 2ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮ ವೀಕ್ಷಿಸಿದರು.