ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಂಡ್ಸೆ ಆತ್ರಾಡಿಯ ಮಾತೃಭೂಮಿ ಯುವ ಸಂಘಟನೆಯ ವತಿಯಿಂದ ಹೊಸವರ್ಷದ ಮುನ್ನ ದಿನ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರಮದಾನ ಮಾಡಲಾಯಿತು. ದೇವಸ್ಥಾನದ ಪರಿಸರದ ಪೊದೆಗಿಡಗಳನ್ನು ಸ್ವಚ್ಚಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತೃಭೂಮಿ ಯುವ ಸಂಘಟನೆ ಅಧ್ಯಕ್ಷ ಶಶಿಧರ ಆಚಾರ್ಯ, ಕಾರ್ಯದರ್ಶಿ ವಿನಂತ್ ಗಾಣಿಗ, ಮಾಜಿ ಅಧ್ಯಕ್ಷರಾದ ಪ್ರಸಾದ ಅಚಾರ್ಯ, ರಮೇಶ ಪೂಜಾರಿ ಬಳಿಹಿತ್ಲು, ಸದಸ್ಯರಾದ ಚಂದ್ರ ಪೂಜಾರಿ ಕಲ್ಮಡಿ, ರಾಜು ಪೂಜಾರಿ ಅರೆಕಲ್ಲು ಮನೆ, ಪ್ರಥ್ಬಿರಾಜ್ ಶೆಟ್ಟಿ, ಪ್ರಜೇತ್ ಶೆಟ್ಟಿ,ಗಣೇಶ್ ದೇವಾಡಿಗ,ಗುರುರಾಜ್ ದೇವಾಡಿಗ, ಶಬರೀಶ್ ಆಚಾರ್ಯ ,ದಿನೇಶ್ ಬಳಗೇರಿ ಮೊದಲಾದವರು ಉಪಸ್ಥಿತರಿದ್ದರು.