ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಸಂಗೀತಾಭಿಮಾನಿಗಳ ಬಹು ನಿರೀಕ್ಷೆಯ ಇನಿದನಿ ಸಂಗೀತ ಸಂಜೆ ಕಾರ್ಯಕ್ರಮವು ಜನವರಿ 14 ರಂದು ನಡೆಯಲಿದ್ದು ಅದರ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕಲಾಕ್ಷೇತ್ರ-ಕುಂದಾಪುರದ ಪ್ರಕಾಶಾಂಗಣದಲ್ಲಿ ನಡೆಯಿತು.
ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ ಕೃಷ್ಣ ಪ್ರಸಾದ್ ಕ್ಯಾಶ್ಯೂಸ್ ವಂಡಾರು, ಇದರ ಮಾಲಕರಾದ ಸಂಪತ್ ಕುಮಾರ್ ಶೆಟ್ಟಿ ಮಾತನಾಡುತ್ತಾ, ಇನಿದನಿ ಪ್ರಾರಂಭದ ವರ್ಷದಲ್ಲಿ ಕೇವಲ 150 ಜನ ಪ್ರೇಕ್ಷಕರಿಂದ ಶುರುವಾಗಿ ಈಗ 8,000 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ ಅಂತಾದರೆ, ಅದು ಇನಿದನಿಯ ಗುಣಮಟ್ಟವನ್ನು ಸಾರುತ್ತದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವೆನ್ನುವುದು ಸ್ವತಃ ಪ್ರೇಕ್ಷಕನಾಗಿ ಇದು ನನ್ನ ಅನುಭವ.
12 ನೇ ವರ್ಷದ ಇನಿದನಿ ಯಾವಾಗೆಂದು ಕಾಯುತ್ತಿದ್ದ ನನಗೆ ಅದೇ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡುವ ಸುಯೋಗ ದೊರಕಿದ್ದು ಖುಷಿಯ ವಿಚಾರ ಎಂದರು.
ಮುಖ್ಯ ಅತಿಥಿಯಾಗಿದ್ದ ಕೃಷ್ಣಕೃಪಾ ಕ್ಯಾಶ್ಯೂಸ್ ಜಪ್ತಿ ಇದರ ನಿರ್ದೇಶಕ ಜಯಪ್ರಕಾಶ್ ಶೆಟ್ಟಿ ಮತ್ತು. ಹಿರಿಯ ಗಾಯಕ ಮೊಹನ್ ಸಾರಂಗ್ ಕುಂದಾಪುರ ಇವರು ಶುಭಕೋರಿದರು.
ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆ ಗೈದರು. ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿ, ದಾಮೋದರ ಪೈ ವಂದನಾರ್ಪಣೆಗೈದರು.