ಕುಂದಾಪುರ ಮಿರರ್ ಸುದ್ದಿ…
ಕೋಟ: ಭಗತ್ ಸಿಂಗ್ ಯುವ ವೇದಿಕೆ ಹಾಗೂ ಬಾಳೆಬೆಟ್ಟು ಫ್ರೆಂಡ್ಸ್ ಆಶ್ರಯದಲ್ಲಿ ಇದೇ ಜ.14ರಂದು ಮಣೂರು ಪರಿಸರದಲ್ಲಿ ಆಯೋಜಿಸಲಿರುವ ಸ್ಪರ್ಶ -2024 ಕಾರ್ಯಕ್ರಮದ ಅಂಗವಾಗಿ ಕ್ರೀಡಾ ಕೂಟವನ್ನು ಇತ್ತೀಚಿಗೆ ಮಣೂರು ಪರಿಸರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದುಬೈ ಉದ್ಯಮಿ ಪ್ರತಾಪ್ ಶೆಟ್ಟಿ ಕೂಡಾಲ್ ಉದ್ಘಾಟಿಸಿ ಮಾತನಾಡಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿಯೊಬ್ಬರನ್ನು ಕ್ರೀಯಾಶೀಲಗೊಳಿಸುವ ಹಾಗೂ ವ್ಯಕ್ತಿತ್ವ ಬದಲಿಸುವ ಜತೆಗೆ ಗ್ರಾಮಗಳನ್ನು ಒಂದುಗೂಡಿಸವ ಕಾರ್ಯಕ್ಷೇತ್ರವಾಗಿದೆ. ಈ ಮೂಲಕ ಕ್ರೀಡೆ ಸ್ಪರ್ಧಾ ಜಗತ್ತನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದೆ. ಇದೇ ರೀತಿ ಊರಿನ ಮೇರುಗು ಹೆಚ್ಚಿಸುವಂತ್ತಾಗಲಿ ಎಂದು ಹಾರೈಸಿದರು . ಇದೇ ವೇಳೆ ಸಮಾರೋಪ ಕಾರ್ಯಕ್ರಮದಲ್ಲಿ ಟೀಮ್ ಸ್ಪರ್ಶದ ಸದಸ್ಯರು ಮತ್ತು ಬಾಳೆಬೆಟ್ಟು ಗ್ರಾಮಸ್ಥರು ವಿವಿಧ ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ ಸ್ಪರ್ಧಾ ವಿಜೇತಯರಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಕೋಟ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಹಾಡಿಕೆರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್, ನಿವೃತ್ತ ಕ್ರೀಡಾ ಪರಿವೀಕ್ಷಣಾ ಅಧಿಕಾರಿ ಗೋಪಾಲ ಶೆಟ್ಟಿ, ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರಾದ ಶಿವರಾಮ ಶೆಟ್ಟಿ , ಶಾಂತ, ಗುಲಾಬಿ ಪೂಜಾರಿ ಉಪಸ್ಥಿತರಿದ್ದರು.
ಸಭಾಧ್ಯಕ್ಷತೆ ರತ್ನಾಕರ ಪೂಜಾರಿ ವಹಿಸಿ ,ಪ್ರಸಾದ್ ಬಿಲ್ಲವ ಸ್ವಾಗತಿಸಿ, ಪ್ರಸ್ತಾವನೆ ಗೈದರು ,ಅವಿನಾಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.