ಶ್ರೀ ರಾಮಮಂದಿರದ ಪ್ರಯುಕ್ತ ದೇಗುಲ ಸ್ವಚ್ಛತಾ ಅಭಿಯಾನದಲ್ಲಿ ಕೋಟ ದೇಗುಲ ಸ್ವಚ್ಛತೆ
ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ರಾಮ ಮಂದಿರದ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಗುಲ ಸ್ವಚ್ಛತೆ ಕರೆನೀಡಿದ ಹಿನ್ನಲೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ, ಹಿರೇಮಹಾಲಿಂಗೇಶ್ವರ ಕಟ್ಟೆ ಬಳಗ ಕೋಟ, ಹಿರೇಮಹಾಲಿಂಗೇಶ್ಚರ ಮಿತ್ರವೃಂದ, ದೇಗುಲದ ಆಡಳಿತ ಮಂಡಳಿಯ ಸಹಯೋಗದೊಂದಿಗೆ 193ನೇ ಭಾನುವಾರ ಅಭಿಯಾನ ಕೋಟ ಮಹತೋಭಾರ ಹಿರೇಮಹಾಲಿಂಗೇಶ್ಚರ ದೇಗುಲದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ನೆರವೆರಿತು.
ಕಾರ್ಯಕ್ರಮಕ್ಕೆ ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಎಸ್ ಪೂಜಾರಿ ಚಾಲನೆ ನೀಡಿದರು.
ದೇಗುಲ ಪ್ರಧಾನ ಅರ್ಚಕ ಗಣೇಶ್ ಭಟ್, ಸದಾಶಿವ ಅಡಿಗ, ಪಂಚಾಯತ್ ಸದಸ್ಯ ಅಜಿತ್ ದೇವಾಡಿಗ, ಆಡಳಿತ ಮಂಡಳಿಯ ಸದಸ್ಯ ಆನಂದ್ ದೇವಾಡಿಗ, ಕೋಟ ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಕಟ್ಟೆ ಬಳಗದ ಪ್ರದೀಪ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.