ಕುಂದಾಪುರ ಮಿರರ್ ಸುದ್ದಿ…
ಕೋಟ: ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಜ.21ರಂದು ಕೋಟ ಅಮೃತೇಶ್ವರೀ ದೇಗುಲಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಸಚಿವರನ್ನು ದೇಗುಲದ ವತಿಯಿಂದ ಗೌರವಿಸಿ ಬರಮಾಡಿಕೊಳ್ಳಲಾಯಿತು ಹಾಗೂ ಕ್ಷೇತ್ರದ ಮಹಿಮೆ ಕುರಿತು ತಿಳಿಸಲಾಯಿತು. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ನೀಡಲಾಯಿತು. ದೇಗುಲದ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಬಾಕಿ ಇದ್ದು ಇಲಾಖೆಯಿಂದ ಸೂಕ್ತ ಅನುದಾನ ಒದಗಿಸುವಂತೆ ಕೋರಲಾಯಿತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದೇಗುಲದದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಆನಂದ ಸಿ.ಕುಂದರ್, ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಸ್ಥಳೀಯ ಮುಖಂಡರಾದ ಚಂದ್ರ ಆಚಾರ್ಯ, ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ, ದಿನೇಶ್ ಬಂಗೇರ, ಪಾರಂಪಳ್ಳಿ ರವೀಂದ್ರ ಐತಾಳ, ದೇವದಾಸ್ ಬಂಗೇರ, ರಾಜೇಶ್ ನೆಲ್ಲಿಬೆಟ್ಟು, ದೇವೇಂದ್ರ ಗಾಣಿಗ, ರಾಘವೇಂದ್ರ ವೈ.ಬಿ.,ಗಣೇಶ್ ಪೂಜಾರಿ,ಸುರೇಶ್ ಪೂಜಾರಿ, ರತ್ನಾಕರ ಶ್ರೀಯಾನ್, ದೇಗುಲದ ಅರ್ಚಕರು, ವ್ಯವಸ್ಥಾಪಕರು ಮೊದಲಾದವರಿದ್ದರು.