ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜಗತ್ತು ಸೃಷ್ಟಿಯಾಗಿರುವುದೇ ವಿಶ್ವಕರ್ಮರಿಂದ. ಅಂತಹಾ ವಿಶ್ವಕರ್ಮರಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಅಂತಹಾ ಸಮಾಜದಲ್ಲಿ ಹುಟ್ಟಿದ ವಿಶ್ವಕರ್ಮರ ಜೀವನ ಸಾರ್ಥಕ್ಯವನ್ನು ಕಂಡುಕೊಳ್ಳಬೇಕಾದರೆ ನಾವು ನಮ್ಮ ಕಾಯಕವನ್ನು ನಿಯತ್ತಿನಲ್ಲಿ ಮಾಡಬೇಕಾಗಿದೆ ಎಂದು ಅಯೋಧ್ಯೆ ಶ್ರೀ ರಾಮ ಪ್ರಭುವಿನ ಪ್ರತಿಮೆ ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಹೇಳಿದರು.
ಅವರು ಕುಂದಾಪುರ ತಾಲೂಕಿನ ಕುಂಭಾಸಿ ಯಲ್ಲಿರುವ ರಥಶಿಲ್ಪಿ ರಾಜ್ ಗೋಪಾಲ ಆಚಾರ್ಯರ ವಿಶ್ವಕರ್ಮ ಕರಕುಶಲ ಶಿಲ್ಪಾಕಲಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನಮಗೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಸಮಯಾವಕಾಶದೊಳಗೆ ಅಚ್ಚುಕಟ್ಟಾಗಿ ನಿರ್ವಹಿಸಿದಾಗ ನಮ್ಮ ಸಮಾಜದ ಗೌರವ ಹೆಚ್ಚಾಗುತ್ತದೆ ಎಂದರು.
ಎಲ್ಲಾ ಕಲೆಗಳ ಹಾಗೇ ಶಿಲ್ಪಕಲೆಗೂ ಮಹತ್ತರವಾದ ಗೌರವವಿವದೆ. ಶಾಸ್ತ್ರೋಕ್ಷತ ಶ್ರೀ ರಾಮನ ಮೂರ್ತಿಯನ್ನು ಕೆತ್ತಿ ಅಯೋಧ್ಯ ಪ್ರಭು ಶ್ರೀರಾಮನ ಮೂರ್ತಿ ಇಡೀ ವಿಶ್ವಕರ್ಮ ಸಮಾಜಕ್ಕೆ ಹೆಮ್ಮೆ ತಂದಿದೆ. ಶಿಲ್ಪಿ ಅರುಣ್ ಯೋಗಿ ರಾಜ್ ತಮ್ಮ ಪ್ರತಿಭೆಯ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಬಾರಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ವಡೇರಹೋಬಳಿ ಹೇಳಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಶಿಲ್ಪಕಲಾ ಕೇಂದ್ರದ ರಥ ಶಿಲ್ಪಿ ಲಕ್ಷ್ಮಿ ನಾರಾಯಣ ಆಚಾರ್ಯ ಕೋಟೇಶ್ವರ ಅವರು ಗುರುತಿಸಿ ಸನ್ಮಾನಿಸಿದರು. ರಥ ಶಿಲ್ಪಿ ಶಂಕರ ಆಚಾರ್ಯ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಆಚಾರ್ಯ ಶ್ರೀಧರ ದಾಸ್, ಪುರೋಹಿತ ರೋಹಿತಾಕ್ಷ ಆಚಾರ್ಯ, ಎಂ.ಪ್ರಭಾಕರ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೊಡು , ಉದ್ಯಮಿ ಸುರೇಶ್ ಬೆಟ್ಟಿನ್, ಕುಂದಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ರಾಘವೇಂದ್ರ ಆಚಾರ್ಯ ಸಾಹೇಬರಕಟ್ಟೆ ವಿಶ್ವನಾಥ ಆಚಾರ್ಯ, ಗಣೇಶ್ ಭಟ್ ಗೋಪಾಡಿ, ಗಣಪತಿ ಆಚಾರ್ಯ, ಪುಷ್ಪಲತಾ ಆರ್. ಆಚಾರ್ಯ ಅಂಬಿಕಾ ಆರ್. ಆಚಾರ್ಯ, ಪತ್ರಕರ್ತ ವಸಂತ್ ಗಿಳಿಯಾರು, ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ. ಎಸ್. ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿ, ವಂದಿಸಿದರು