ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಲು ಬದ್ಧ : ಸಚಿವ ಅಶ್ವಥ್ ನಾರಾಯಣ ಸಿ.ಎನ್

0
740

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ರಾಜ್ಯ ಉನ್ನತ ಶಿಕ್ಷಣ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿ & ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಅಶ್ವಥ್ ನಾರಾಯಣ ಸಿ.ಎನ್ ಅವರು ಶನಿವಾರ ಬೈಂದೂರಿನಲ್ಲಿ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಐಟಿಐಗಳನ್ನು ಅಂತರಾಷ್ಟೀಯ ಮಟ್ಟಕ್ಕೆ ಉನ್ನತಿಕರಿಸುತ್ತಿರುವ ಕಾಮಗಾರಿ ಪರಿಶೀಲನೆ ನಡೆಸಿದರು.


ಗ್ರಾಮೀಣ ಭಾಗದಲ್ಲಿ ವಿಶ್ವ ದರ್ಜೆಯ ಐಟಿಐ ಸಂಸ್ಥೆ ಬೈಂದೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಈ ಐಟಿಐ ಇಂಡ್ರಸ್ಟೀಸ್ 4.0 ಅನುಗುಣವಾಗಿ ನಿರ್ಮಾಣವಾಗುತ್ತಿದೆ. ಇಲ್ಲಿ ಹೊಸದಾಗಿ 11 ಕೋರ್ಸ್ ಪ್ರಾರಂಭ ಮಾಡುತ್ತಿದ್ದೇವೆ, 6 ಕೋರ್ಸ್‍ಗಳು ಒಂದು ವರ್ಷಗಳ ಕಾಲ, 5 ಕೋರ್ಸ್‍ಗಳು ಎರಡು ವರ್ಷಗಳ ಕಾಲ. 23 ಹೊಸ ಪ್ರೋಗ್ರಾಮಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಬಹು ಬೇಡಿಕೆ ಇರುವ ಎಲ್ಲಾ ಕ್ಷೇತ್ರಕ್ಕೆ ಬೇಕಾಗುವ ಕಾರ್ಯಕ್ರಮಗಳಿವೆ. ಈ ಭಾಗಕ್ಕೆ, ಹೊಸ ಉದ್ಯಮಗಳು ಬಂದರೆ, ಈ ಭಾಗದ ಮಕ್ಕಳಿಗೆ ಉದ್ಯೋಗ ಸಿಗುವಂತಾಗಬೇಕು. ವಿಶ್ವದ ಯಾವುದೇ ಭಾಗದಲ್ಲಿ ಉದ್ಯೋಗ ಪಡೆಯಬೇಕಾದರೂ, ಇಲ್ಲಿ ಅಗತ್ಯವಿರುವ ಸೂಕ್ತವಾದ ತರಬೇತಿಯನ್ನು ನೀಡಿ, ವಿದ್ಯಾರ್ಥಿಗಳಿಗೆ ಉತ್ತಮವಾದ ಭವಿಷ್ಯವನ್ನು ರೂಪಿಸಲಾಗುವುದು. ಇಲ್ಲಿ ಉತ್ತಮವಾದ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಭರವಸೆ ನೀಡುತ್ತೇನೆ ಎಂದರು.

Click Here

Click Here

ಇಂಜಿನಿಯಂರ್ ಗೆ ಗರಂ ಆದ ಸಚಿವರು : ಐ.ಟಿ.ಐ ಕಾಲೇಜಿನ ಕಾಮಗಾರಿ ಪರೀವಿಕ್ಷಣೆ ವೇಳೆ, ಕಾಮಗಾರಿ ವಿವರ ಕೇಳಿದಾಗ ಯಾವುದೇ ದಾಖಲೆಯನ್ನು ಹಾಜರುಪಡಿಸದ ಇಂಜಿನಿಯರ್ ವಿರುದ್ದ ಸಚಿವರು ಗರಂ ಆದರು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಮೂಲ ಯೋಜನೆಯ ಪ್ರಕಾರ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು,ಇದು ಮಹತ್ವ ಪೂರ್ಣ ಯೋಜನೆಯಾಗಿರುವುದರಿಂದ ಕಾಮಗಾರಿಯಲ್ಲಿ ಯಾವುದೇ ಲೋಪ ಉಂಟಾಗದಂತೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್, ಬೈಂದೂರ ಐಟಿಐ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಮತ್ತಿತರರು ಇದ್ದರು.

Click Here

LEAVE A REPLY

Please enter your comment!
Please enter your name here