ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸರ್ಕಾರಿ ಪ್ರೌಢ ಶಾಲೆ ಕಾಳಾವರದಲ್ಲಿ 8 ಮತ್ತು 9ನೆಯ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಂತರದ ವಿಶೇಷ ಚಟುವಟಿಕೆಗಳು ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯ ಪೂರ್ವದಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಲು ಪಠ್ಯೇತರ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ದೈಹಿಕ ಶಿಕ್ಷಣ ಶಿಕ್ಷಕ ರಾಮರವರು ಹೊಸ ಆಟಗಳ ಪರಿಚಯ ಮಾಡುತ್ತಿದ್ದು ವಿದ್ಯಾರ್ಥಿಗಳು ಬಲು ಆಸಕ್ತಿಯಿಂದ ಭಾಗವಹಿಸಿದರು.
ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ, ಸರಳ ಗಣಿತ, ತಾರ್ಕಿಕ ಗಣಿತ, ವ್ಯವಹಾರಿಕ ವಿಜ್ಞಾನ, ಕಂಪ್ಯೂಟರ್, ಪೌರಾಣಿಕ, ಕ್ರೀಡೆ ಹೀಗೆ ನಿರ್ಧಿಷ್ಟ ಕ್ಷೇತ್ರಗಳ ಬಗ್ಗೆ ಮೊದಲೇ ತಯಾರಿ ನಡೆಸಲು ತಿಳಿಸಿ, ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ರೋಟರಿ ಮಿಡ್ ಟೌನ್ ಕುಂದಾಪುರದ ಸಹಯೋಗದಲ್ಲಿ ಶಾಲಾ ಇಂಟ್ರ್ಯಾಕ್ಟ್ ಕ್ಲಬ್ ವತಿಯಿಂದ ಕಾರ್ಯಕ್ರಮ ನಡೆಸಲಾಯಿತು.
ಇಂಟ್ರಾಕ್ಟ್ ಅಧ್ಯಕ್ಷ 9ನೆಯ ತರಗತಿಯ ರಶ್ವಿನ್ ಕಾರ್ಯಕ್ರಮಕ್ಕೆ ಸರ್ವ ತಯಾರಿ ಮಾಡಿದರು. ಕ್ಲಬ್ ನ ಮಾರ್ಗದರ್ಶಿ ಶಿಕ್ಷಕ ದಿನೇಶ್ ಪ್ರಭು ರಸಪ್ರಶ್ನೆ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದ ವಿಶೇಷ ಸುತ್ತುಗಳನ್ನು ಶಿಕ್ಷಕ ರವಿರಾಜ್ ಶೆಟ್ಟಿ, ಹಾಗೂ ಶಿಕ್ಷಕಿ ಹೇಮಾ ಅವರು ನಿರ್ವಹಿಸಿ ಬಹುಮಾನ ವಿತರಿಸಿದರು.
8 ಮತ್ತು 9ನೆಯ ತರಗತಿಯವರೆಗೆ ಪ್ರತ್ಯೇಕ ಎರಡು ಸ್ಥರಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರತಿ ತಂಡದಲ್ಲಿ ಈರ್ವರಿದ್ದು, ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ವಿತರಿಸಲಾಯಿತು.