ಮೇ 5ರಂದು ನಾಲ್ಕನೇ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಸಮ್ಮೇಳನಾಧ್ಯಕ್ಷರಾಗಿ ಎ ಎಸ್ ಎನ್ ಹೆಬ್ಬಾರ್ ಆಯ್ಕೆ

0
430

ಕುಂದಾಪುರ ಮಿರರ್ ಸುದ್ದಿ…

ಕೋಟ : ಡಾ.ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಕೋಟ ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು ಕೋಟ, ಕಾರ್ಯನಿರತರ ಪತ್ರಕರ್ತರ ಸಂಘ ಬ್ರಹ್ಮಾವರ ತಾಲ್ಲೂಕು, ಕುಂದಾಪುರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ ಅವರ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಮೇ 5 ರಂದು ನಡೆಯುವ ನಾಲ್ಕನೇಯ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಸಮ್ಮೇಳನಾಧ್ಯಕ್ಷರಾಗಿ ಕುಂದಾಪ್ರ ಕನ್ನಡ ಹರಿಕಾರ ಎಸ್ ಎನ್ ಹೆಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿದೆ.

Click Here

Click Here

ಕುಂದಾಪುರ ಕನ್ನಡದ ಕಂಪನ್ನು ಪಸರಿಸಲು ಹಲವಾರು ಹೊಸ ಸಾಧ್ಯತೆಗಳ ಕೆಲಸಗಳನ್ನು ಮಾಡುತ್ತಾ, ಸಾಹಿತ್ಯ, ಕವನಗಳನ್ನು ರಚಿಸಿ ಆ ಮೂಲಕ ಆರಂಭದಲ್ಲಿಯೇ ಕುಂದಾಪ್ರ ಕನ್ನಡಕ್ಕೆ ಮೂಲ ದಿಕ್ಕನ್ನು ದೆಸೆಯನ್ನು ನೀಡಿ ದಂತಹವರು ಎಸ್ ಎಸ್ ಹೆಬ್ಬಾರರು. ಮೇ 5 ರಂದು ನಡೆಯುವ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಚಾಲಕ ಸತೀಶ್ ವಡ್ಡರ್ಸೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here