ಕುಂದಾಪುರ: ಬಡಗುತಿಟ್ಟಿನ ಯಕ್ಷಗಾನದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0
333

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬಡಗುತಿಟ್ಟಿನ ಯಕ್ಷಗಾನದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಪೆರ್ಡೂರು ಮೇಳದಲ್ಲಿ 28 ವರ್ಷಗಳಲ್ಲಿ ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ ಅವರು, ಅದಕ್ಕೂ ಮುನ್ನ ಕೋಟ ಅಮೃತೇಶ್ವರಿ ಮೇಳದಲ್ಲಿ ಕೂಡಾ ಸೇವೆ ಸಲ್ಲಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದ ರಂಗಂಮಚವೇರಿದವರು ಯಶಸ್ಸಿನ ಶಿಖರ ತಲುಪಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ‌ಮಾಡಿ ಕಾರ್ಯಕ್ರಮ ನೀಡುತ್ತಿದ್ದರು.

Click Here

Click Here

ಧಾರೇಶ್ವ ರ ಭಾಗವತರು ಎಂದೇ ಖ್ಯಾ ತರಾದ ಸುಬ್ರಹ್ಮಣ್ಯ ಧಾರೇಶ್ವರ ಸುಮಾರು 40 ವರ್ಷಗಳಿಂದ ಅನುಭವವುಳ್ಳರು. ಹಂಗಾರಕಟ್ಟೆ ಯಕ್ಷಗಾನ ಭಾಗವತಿಗೆ ಕೇಂದ್ರದಲ್ಲಿ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿದ್ದರೂಸುಬ್ರಹ್ಮಣ್ಯ ಧಾರೇಶ್ವರ ಅಮೃತೇಶ್ವರಿ ಯಕ್ಷಗಾನಮೇಳವನ್ನುಸೇರಿದ್ದು ಭಾಗವತರಾಗಿ ಅಲ್ಲ . ಎಲೆಕ್ಟ್ರಿ ಷಿಯನ್ ಆಗಿ. ಗೋಕರ್ಣದಲ್ಲಿ ಎಲೆಕ್ಟ್ರಿ ಕಲ್ ಅಂಗಡಿ ಇಟ್ಟು ಕೊಂಡಿದ್ದ , ನಾಟಕದ ಸಖ್ಯ ವನ್ನೂ ಹೊಂದಿದ್ದ ಸುಬ್ರಹ್ಮಣ್ಯ ಒಂದೆರಡು ಹಿಂದೂಸ್ತಾನಿ ರಾಗಗಳ ಪರಿಚಯವನ್ನೂ ಹೊಂದಿದ್ದರು. ಅದೇ ಅವರನ್ನು ಯಕ್ಷಗಾನ ರಂಗಕ್ಕೆ ಕರೆದು ತಂದಿತು.ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಮೂಲಕ ರಂಗಸ್ಥಳದ ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು.ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು.

ಪೆರ್ಡೂರು ಮೇಳದಲ್ಲಿ 28 ವರ್ಷಗಳಲ್ಲಿ ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ ಅವರು, ಅದಕ್ಕೂ ಮುನ್ನ ಕೋಟ ಅಮೃತೇಶ್ವರಿ ಮೇಳದಲ್ಲಿ ಕೂಡಾ ಸೇವೆ ಸಲ್ಲಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದ ರಂಗಂಮಚವೇರಿದವರು ಯಶಸ್ಸಿನ ಶಿಖರ ತಲುಪಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ‌ಮಾಡಿ ಕಾರ್ಯಕ್ರಮ ನೀಡುತ್ತಿದ್ದರು.

Click Here

LEAVE A REPLY

Please enter your comment!
Please enter your name here