ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ವತಿಯಿಂದ ಬ್ರಹ್ಮಾವರ ಅಪ್ಪ ಅಮ್ಮ ಅನಾಥಾಶ್ರಮಕ್ಕೆ 40ಸೀರೆ ಸಹಿತ ಆಹಾರ ಸಾಮಾಗ್ರಿಗಳನ್ನು ಹಸ್ತಾಂತರ ಭಾನುವಾರ ಶ್ರೀ ದೇಗುಲದಲ್ಲಿ ನಡೆಯಿತು.
ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಬಟ್ಟೆ, ಆಹಾರ ಸಾಮಾಗ್ರಿಗಳನ್ನು ಅಪ್ಪ ಅಮ್ಮ ಅನಾಥಾಶ್ರಮದ ಮುಖ್ಯಸ್ಥ ಕೂರಾಡಿ ಪ್ರಶಾಂತ್ ಪೂಜಾರಿ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಕ್ತೇಶ್ವರಿ ಬಳಗದ ಅಧ್ಯಕ್ಷ ನಾರಾಯಣ ವಿ. ಆಚಾರ್, ಬಳಗದ ಪ್ರಮುಖರಾದ ವೆಂಕಟೇಶ ಪೂಜಾರಿ, ಗಣೇಶ್ ಪೂಜಾರಿ ಬೆಣ್ಣೆಕುದ್ರು, ಸಂಜೀವ ಮರಕಾಲ, ಮಹಾಬಲ ಮರಕಾಲ, ವಿಘ್ನೇಶ್ ಆಚಾರ್ ಮತ್ತಿತರರು ಇದ್ದರು.