ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ಸಂಸ್ಕ್ರತಿ ಇಲಾಖೆಯ ಕನ್ನಡಕ್ಕಾಗಿ ನಾವು ಮಾತಾಡ್ ಮಾತಾಡ್ ಕನ್ನಡ ಅಭಿಯಾನದಡಿ ರಾಜ್ಯಾದಾದಂತ್ಯ ನಡೆದ ಲಕ್ಷ ಕಂಠ ಗಾಯನ ಕಾರ್ಯಕ್ರಮವನ್ನು ಸ್ಥಳೀಯ ಡಾ.ರಾಜ್ ಕುಮಾರ್ ಸಂಘಟನೆಯ ಆಶ್ರಯದಲ್ಲಿ ಸಾಂಗವಾಗಿ ನೆರವೇರಿತು.
ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸಂಘಟನೆಯ ಅಧ್ಯಕ್ಷರಾದ ರತ್ನಾಕರ ಪೂಜಾರಿ ಅವರ ಉಸ್ತುವಾರಿಯಲ್ಲಿ ಜರಗಿದ ಈ ಕಾರ್ಯ ಕ್ರಮದಲ್ಲಿ ಯುವ ಗಾಯಕ ಪ್ರತಿಭೆಗಳಾದ ಕೀರ್ತನ್ ಖಾರ್ವಿ,ಹರೀಶ್ ಖಾರ್ವಿ ಅವರ ಕಂಠ ಸಿರಿಯಲ್ಲಿ “ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟ ಬೇಕು” ಗೀತೆಗಳು ಮೊಳಗಿ ಕೇಳುಗರನ್ನು ಮುದಗೊಳಿಸಿದವು.
ಹೊಸ ಬಸ್ಸು ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯ ಕ್ರಮಕ್ಕೆ ಹಿರಿಯ ನ್ಯಾಯವಾದಿ ಮುದ್ದಣ ಶೆಟ್ಟಿ, ಉದ್ಯಮಿ ಮಹೇಂದ್ರ ಶೆಟ್ಟಿ ಕೂಡಾಲ್, ಯಾಸೀನ್ ಹೆಮ್ಮಾಡಿ,ಅಂತ ರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಸಂತೋಷ್ ಕುಂದೇಶ್ವರ್, ಮಾಜಿ ಪುರಸಭಾ ಸದಸ್ಯ ಕೇಶವ ಭಟ್, ಕೋಡಿ ಪ್ರಸಾದ್ ಗಾಣಿಗ ಸೇರಿದಂತೆ ಹಲವಾರು ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದು ಕಾರ್ಯ ಕ್ರಮವನ್ನು ಯಶಸ್ವಿ ಗೊಳಿಸಿದರು.